ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಸಿ ನೆಡುವ ಕಾರ್ಯಕ್ರಮ

ರಾಯಚೂರು.ಆ.೦೨- ವನ್ಯಜೀವಿಗಳಿಗೆ ಒಂದು ವಿಶೇಷವಾದ ಸ್ಥಾನವಾಗಿದೆ ಯಾಕೆಂದರೆ ಅನೇಕ ರೀತಿಯ ಕಾಡು ಪ್ರಾಣಿಗಳು ಬೇರೆ ಬೇರೆ ಪ್ರದೇಶಳಿಂದ ಬಂದು ವಿವಿಧ ತಳಿಗಳ ಕಾಡು ಜೀವಿಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಜನ್ಮ ನೀಡಿಕೊಂಡು ಮರಳಿ ವಾಪಸ್ ತೆರಳುತ್ತವೆ ಎಂದು ರಾಯಚೂರು ಜಿಲ್ಲೆಯ ಉಪ ಸಂರಕ್ಷಣಾಧಿಕಾರಿಗಳಾದ ಶ್ರೀ ಏ ಚಂದ್ರಣ್ಣ ಅವರು ನಗರದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರ ೨೦೨೧-೨೨ ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ರಾಯಚೂರಿನ ಸುತ್ತಮುತ್ತಲಿನ ಅರಣ್ಯ ಪ್ರದೇಶದ ವಿಶೇಷತೆಯ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನರಾದ ಡಾ. ಎಸ್ ಬಿ ಗೌಡಪ್ಪ ಅವರು ಮಾತನಾಡಿ ಶಿಬಿರಾರ್ಥಿಗಳಿಗೆ ಸಮಾಜ ಸೇವೆ ಮಾಡಲು ಇದೊಂದು ಸದಾವಕಾಶ ಎಂದು ತಿಳಿಸಿದರು. ಕೃಷಿ ತಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಉದಯಕುಮಾರ ನಿಡೋಣಿ ಅವರು ಮಾತನಾಡಿ ಏನನ್ನು ಆಶಿಸದೆ ಸೇವೆಯನ್ನು ಮಾಡುವದೇ ನಿಜವಾದ ದೇಶ ಸೇವೆ ಇಂಥ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಿಂಗನೋಡಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗದ್ದಿ ಬಸಪ್ಪ ಅವರು ಮಾತನಾಡಿ ನಮ್ಮ ಶಾಲೆಯಲ್ಲಿ ಇದುವರೆಗೆ ಅನೇಕ ಜನರು ವಿಶೇಷ ಶಿಬಿರಗಳನ್ನು ಮಾಡಿದ್ದಾರೆ ಆದರೆ ನಾನು ಕಂಡಂತೆ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಒಂದು ವಿಶೇಷವಾದ ತಂಡವಾಗಿದೆ ಮತ್ತು ನೀವು ನಮ್ಮ ಶಾಲೆಯಲ್ಲಿ ಮಾಡಿರುವ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿ, ಈ ಕಾರ್ಯಕ್ರಮದ ಯಶಸ್ವಿಗೆ ಕಾರಣೀಭೂತರಾದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನರಾದ ಡಾ. ಎಂ ನೇವಿಚಂದ್ರಪ್ಪ ಅವರು ಮಾತನಾಡಿ ಶಿಬಿರಾರ್ಥಿಗಳ ಮುಂದಿನ ಜೀವನದಲ್ಲಿ ಸೇವೆಯ ಮನೋಭಾವವನ್ನು ಬೆಳೆಸಿಕೊಂಡು ಹೋಗಬೇಕೆಂದು ಹೇಳಿ ಇಂಥ ಕಾರ್ಯಕ್ರಮಗಳಿಗೆ ನನ್ನ ಬೆಂಬಲ ಇರುತ್ತದೆ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಡಾ. ಮುರಳಿ ಎಂ ರವರು ನಡೆಸಿಕೊಟ್ಟ ಈ ಕಾರ್ಯಕ್ರಮವನ್ನು ನಿಖಿಲ್ ಕುಮಾರ್ ನಿರೂಪಿಸಿದರೆ ರಮೇಶ್ ಸ್ವಾಗತಿಸಿದರು. ಕೃಷಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಯೇಸಪ್ಪ ಎಲ್ ರವರು ಸಮಾರೋಪ ಸಮಾರಂಭ ಕಾರ್ಯಕ್ರಮದ ಎಲ್ಲಾ ಗಣ್ಯ ಅತಿಥಿಗಳಿಗೆ ಮತ್ತು ಈ ಕಾರ್ಯಕ್ರಮ ಯಶಸ್ಸುವಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ವಂದಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.