ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನಾಚರಣೆ


ಸಂಜೆವಾಣಿ ವಾರ್ತೆ
ಸಂಡೂರು :ಏ:11  ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನಾಚರಣೆ ಅಂಗವಾಗಿ ಜಾಗೃತಿ ಮತ್ತು ಗಂಡಾಂತರ ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ ನಡೆಯಿತು, ಕಾರ್ಯಕ್ರಮ ಉದ್ದೇಶಿಸಿ ಸ್ತ್ರೀರೋಗ ತಜ್ಞೆ ಡಾ.ರಜಿಯಾ ಬೇಗಂ ಮಾತನಾಡಿ “ತಾಯ್ತನ ಸುಖಕರವಾಗಿರ ಬೇಕೆ ಹೊರತು ಪ್ರಯಾಸಕರ ವಾಗಿರ ಬಾರದು”, ಇಲಾಖೆಯ  ಉಚಿತ ಗರ್ಭಿಣಿ ತಪಾಸಣೆ, ಸ್ಕ್ಯಾನಿಂಗ್, ಸಾಂಸ್ಥಿಕ ಹೆರಿಗೆ, 108 ಆಂಬ್ಯುಲೆನ್ಸ್ ಸೇವೆ ಮತ್ತು  ಪಿ.ಎಮ್.ಎಸ್.ಎಮ್.ಎ ಮತ್ತು ಜೆ.ಎಸ್.ವೈ,  ಜೆ.ಎಸ್.ಎಸ್.ಕೆ, ಹಾಗೂ ನಗುಮಗು ಯೋಜನೆಯ ಸೌಲಭ್ಯ ಪಡೆದು ಕೊಳ್ಳಬೇಕು ಎಂದು ಅವರು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಗರ್ಭಿಣಿ ಅವಧಿಯ  280 ದಿನಗಳೂ ಆಹ್ಲಾದಕರ ವಾತಾವರಣ ಇರುವಂತೆ ನೋಡಿಕೊಳ್ಳುವುದು ಕುಟುಂಬದ ಎಲ್ಲಾ ಸದಸ್ಯರು ಆದ್ಯ ಕರ್ತವ್ಯವಾಗಿರುತ್ತದೆ,  ಇಷ್ಟವಾಗುವ ಅಡುಗೆ, ತಿನಿಸುಗಳನ್ನು ಮಾಡಿಕೊಡುವುದು, ಸ್ಥಳಿಯವಾಗಿ ದೊರೆಯುವ ಹಣ್ಣು ಹಂಪಲಗಳನ್ನು  ಸೇವಿಸುವುದು, ಮಧ್ಯಾಹ್ನದ ವಿಶ್ರಾಂತಿ, ಬೆಳಗಿನ ಮತ್ತು ಸಂಜೆ ವಾಕಿಂಗ್, ಸುಶ್ರಾವ್ಯ ಸಂಗೀತ ಆಲಿಸುವುದು, ದ್ಯಾನ, ಕುಟುಂಬದ ಸದಸ್ಯರೊಂದಿಗೆ ಲವಲವಿಕೆಯಿಂದ ಇರುವುದು, ಹಾಗೇ ಸುರಕ್ಷಿತ ಹೆರಿಗೆಗಾಗಿ ತಪಾಸಣೆ, ಚಿಕಿತ್ಸೆಯನ್ನು ಮುಂದುವರೆಸಿದಾಗ ಮಾತ್ರ ಸುಖಕರ ತಾಯ್ತನವಾಗಲು ಸಾಧ್ಯ, “ಸುರಕ್ಷಿತ ಹೆರಿಗೆ, ಸುರಕ್ಷಿತ ಮಗು,ಸುರಕ್ಷಿತ ಮಾತೃತ್ವ”  ಎಂದು ತಿಳಿಯಬೇಕು ಎಂದು ಅವರು ತಿಳಿಸಿದರು,
 ಈ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್,ಡಾ.ಪ್ರಿಯಾಂಕಾ, ಡಾ.ಪದ್ಮಾ, ಶುಶ್ರೂಷಕರಾದ ಹುಲಿಗೆಮ್ಮ, ರೇಷ್ಮಾ, ಗೀತಾ, ಆಶಾ ಕಾರ್ಯಕರ್ತೆ ಎರ್ರಮ್ಮ,ಸವಿತಾ,ಭಾಗ್ಯ, ಮಂಗಳ, ವಿಜಯಲಕ್ಷ್ಮಿ, ಗರ್ಭಿಣಿ ಮಹಿಳೆಯರಾದ ಶಿಲ್ಪಾ, ಶೋಭಾ,ಎರ್ರಮ್ಮ,ಕೀರ್ತಿ, ಪಲ್ಲವಿ, ನಂದಿನಿ,ಸುನಿತಾ,ತ್ರಿವೇಣಿ, ಖಾಜಾಭಿ, ಬಸಮ್ಮ,ಕಾವೇರಿ, ಅಮೃತಾ, ಸಿಬ್ಬಂದಿ ರತ್ನಮ್ಮ, ಸಿದ್ದೇಶ, ಇತರರು ಉಪಸ್ಥಿತರಿದ್ದರು

One attachment • Scanned by Gmail