ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಸ್ಥಾನ

ಕಲಬುರಗಿ,ಜೂ.15: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯವ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ ವಿಶ್ವವಿದ್ಯಾಲಯ ವಿಭಾಗದಲ್ಲಿ 151-200ರ ಶ್ರೇಯಾಂಕ-ಬ್ಯಾಂಡ್‍ನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಇದು ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಬೋಧನೆ, ಕಲಿಕೆ, ಸಂಶೋಧನೆ ಮತ್ತು ಪ್ರಕಟಣೆಗಳ ಗುಣಮಟ್ಟವನ್ನು ಉನ್ನತ ಮಟ್ಟದ್ದಾಗಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಆಂತರಿಕ ಗುಣಮಟ್ಟ ಮೌಲ್ಯಮಾಪನ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಂತಹ ಹೊಸದಾಗಿ ಸ್ಥಾಪಿಸಲಾದ ವಿಶ್ವವಿದ್ಯಾಲಯವು ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ಶ್ರೇಯಾಂಕದಲ್ಲಿ ಸುರಕ್ಷಿತ ಸ್ಥಾನವನ್ನು ಪಡೆಯುವುದು ಬಹಳ ಒಳ್ಳೆಯ ಸುದ್ದಿ ಎಂದರು.
ಇದು ವಿಶ್ವವಿದ್ಯಾಲಯಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಆದರೆ ಕೇಂದ್ರೀಯ ವಿಶ್ವವಿದ್ಯಾಲಯವಾಗಿರುವುದರಿಂದ ನಾವು ಒಟ್ಟಾರೆ ಶ್ರೇಯಾಂಕದಲ್ಲಿ ಅಗ್ರ 100ರೊಳಗೆ ಇರುವ ಗುರಿಯನ್ನು ಹೊಂದಿರಬೇಕು. ಅದಕ್ಕಾಗಿ ನಾವು ಐಐಟಿ, ಐಐಎಂಗಳ ಮತ್ತು ಇತರ ಹಳೆಯ ಕೇಂದ್ರೀಯ ವಿಶ್ವವಿದ್ಯಾಲಯಗಳೊಂದಿಗೆ ಸ್ಪರ್ಧಿಸಬೇಕಾಗಿದೆ. ಸಂಶೋಧನೆ, ಯೋಜನೆಗಳು ಮತ್ತು ಪ್ರಕಟಣೆಗಳ ಗುಣಮಟ್ಟವನ್ನು ಹೆಚ್ಚಿಸಲು ಅಧ್ಯಾಪಕರಿಗೆ ಅವರು ಸಲಹೆ ನೀಡಿದರು.
ಅವು ಗುಣಮಟ್ಟದ ಮೌಲ್ಯಮಾಪನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದ ಅವರು, ಇದೆ ಸಂದರ್ಭದಲ್ಲಿ ಯೋಜನೆಯಲ್ಲಿ ಕೆಲಸ ಮಾಡಿದ ಎಲ್ಲ ಅಧ್ಯಾಪಕರು ಮತ್ತು ತಜ್ಞರ ತಂಡವನ್ನು ಅಭಿನಂದಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಬಸವರಾಜ್ ಡೋಣೂರ್ ಅವರು ಮಾತನಾಡಿ, ಎನ್‍ಆರ್‍ಐಎಫ್ ಶ್ರೇಯಾಂಕದಲ್ಲಿಯೋಗ್ಯ ಸ್ಥಾನವನ್ನು ಗಳಿಸುವುದು ವಿಶ್ವವಿದ್ಯಾಲಯಕ್ಕೆ ಅತ್ಯಂತ ಮಹತ್ವದ ವಿಷಯವಾಗಿದೆ. ಇದು ಅಧ್ಯಾಪಕರಿಗೆ ತಮ್ಮ ಬೋಧನೆ, ಸಂಶೋಧನಾ ಚಟುವಟಿಕೆಗಳನ್ನು ಉತ್ತಮಗೊಳಿಸಲು ಮತ್ತು ಗುಣಮಟ್ಟದ ಪ್ರಕಟಣೆಗೆ ಪ್ರಯತ್ನಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ಐಕ್ಯೂಎಸಿ ನಿರ್ದೇಶಕ ಪೆÇ್ರ. ಗಣೇಶ್ ಪವಾರ್, ಉಪ ನಿರ್ದೇಶಕ ಪೆÇ್ರ. ವೆಂಕಟರಮಣದೊಡ್ಡಿ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಪೆÇ್ರ. ವಿಷ್ಣುವರ್ಧನರೆಡ್ಡಿ, ಎನ್‍ಐಆರ್‍ಎಫ್ ಸಂಯೋಜಕಡಾ.ಗುರುರಾಜ ಮುಕರಂಬಿ, ಡೀನ್‍ಗಳು, ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.