
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.09: ಭಾರತೀಯ ವೈದ್ಯಕೀಯ ಸಂಘದಿಂದ ಇತ್ತಿಚ್ಚೆಗೆ ನವದೆಹಲಿಯಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ “ರಾಷ್ಟ್ರೀಯ ಸಮುದಾಯ ಸೇವಾ ಪ್ರಶಸ್ತಿ”ಯನ್ನು ಪಡೆದ ವೈದ್ಯ ಡಾ.ಮಧುಸೂದನ ಕಾರಿಗನೂರು ಅವರಿಗೆ ಸೃಜನಾ ಪೌಂಡೇಷನ್ ವತಿಯಿಂದ ಕಛೇರಿಯಲ್ಲಿ ಸನ್ಮಾನಿಸಿದರು.
ಸದಸ್ಯರಾದ ನಿವೃತ್ತ ಉಪನ್ಯಾಸಕ ಶಿವಕುಮಾರ್ ಬಳಿಗಾರ, ಸ್ತ್ರೀತಜ್ಞೆ ಡಾ.ಪ್ರಭಾವತಿ ಕಾರಿಗನೂರು, ಹಾಸ್ಯ ಕಲಾವಿದ ಜೆ.ನರಸಿಂಹಮೂರ್ತಿ, ಶಿಕ್ಷಕರಾದ ವೆಂಕಟೇಶ ಯಾದವ್, ಎಚ್.ಎಂ.ಹಿರೇಮಠ, ವೆಂಕಟೇಶ, ಆರೋಗ್ಯ ಸಿಬ್ಬಂದಿ ಪ್ರವೀಣ್ ಕುಮಾರ್, ಶಿವ ಗಣೇಶ, ವೀರೇಶ ಸ್ವಾಮಿ, ವಿನೋದ್ ಕುಮಾರ್, ಜೆ.ಗುರುರಾಜ್ ಆಚಾರ್ಯ ಇದ್ದರು.