ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರ ಪಾತ್ರ

ಕಲಬುರಗಿ:ಎ.1:ಗುಲಬರ್ಗಾ ವಿಶ್ವವಿದ್ಯಾಲಯವು ಭಾರತಿಯ ಶಿಕ್ಷಣ ಮಂಡಳ ಉತ್ತರ ಪ್ರಾಂತನ ಕಲಬುರಗಿ ಜಿಲ್ಲಾ ಘಟಕ ಮತ್ತು ನೀತಿ ಆಯೋಗದ ಸಹಯೋಗದೊಂದಿಗೆ ಒಂದು ದಿನದ ವೆಬಿನಾರನ್ನು ದಿನಾಂಕ 31.03.2021ರಂದು ಆಯೋಜಿಸಲಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರ ಪಾತ್ರ, ವಿಷೇಶವಾಗಿ ಉನ್ನತ ಶಿಕ್ಷಣ ವಲಯದಲ್ಲಾಗಬೇಕಾದ ಅಮೂಲಾಗ್ರ ಬದಲಾವಣೆ ಬಗ್ಗೆ ಚರ್ಚಿಸಲು ಮತ್ತು ಈ ನಿಟ್ಟಿನಲ್ಲಿ ರಾಷ್ಟೀಯ ಶಿಕ್ಷಣ ನೀತಿ 2020ರಲ್ಲಿ ಅಡಕವಾಗಿರುವ ಎಲ್ಲ ವಿಷಯಗಳ ಬಗ್ಗೆ ಚಿಂತನೆ ಹಾಗೂ ಅವುಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳ ಮುಂದಿರುವ ಸವಾಲುಗಳು ಹಾಗು ಮುಂದೆ ಕೈಗೊಳ್ಳಬೇಕಾದ ಕ್ರಮಗಳಬಗ್ಗೆ ಚರ್ಚಿಸಲು ಈ ಒಂದು ದಿನದ ವೆಬಿನಾರನ್ನು ಆಯೋಜಿಸಲಾಗಿತ್ತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಹಿರಿಯ ಶಿಕ್ಷಣ ತಜÐರು, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕರಡು ರಚನಾ ಸಮಿತಿ ಸದಸ್ಯರಾಗಿದ್ದ ಆಂದ್ರಪ್ರದೇಶದ ಕೇಂದ್ರಿಯ ಟ್ರೈಬಲ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ತೇಜಸ್ವಿ ಕಟ್ಟಿಮನಿ ಅವರು ಭಾಗವಹಿಸಿ ಮಾತನಾಡುತ್ತ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಪ್ರತಿಪಾದಿಸಿ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಎಲ್ಲ ಪ್ರಯೋಜನಗಳು ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳಿಗೆ ಮುಟ್ಟುವ ರೀತಿಯಲ್ಲಿ ಅನುಷ್ಠಾನಗೊಳಿಸುವ ನೀತಿ ನಿರುಪಣೆಯಲ್ಲಿ ಅಡಕವಾಗಬೇಕೆಂದು ಕೇಳಿಕೊಂಡರು.

ಶ್ರೀ. ಶಂಕರಾನಂದ ಜಿ. ಅಖಿಲ ಭಾರತ ಜಂಟಿ ಸಂಯೋಜಕರು ಭಾರತ ಶಿಕ್ಷಣ ಮಂಡಳಿ ಇವರು ಈ ವೆಬಿನಾರಿನ ಕೀ ನೋಟ ಭಾಷಣ ನೀಡಿದರು. ಹೊಸ ರಾಷ್ಟ್ರೀಯ ನೀತಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಎಲ್ಲ ಶಿಕ್ಷಕರು ಈ ನೀತಿಯನ್ನು ಗಂಭಿರವಾಗಿ ಸ್ವಿಕರಿಸಿ ಪಠ್ಯಕ್ರಮದ ಬದಲಾವಣೆ, ಶಿಕ್ಷಣ ಪದ್ದತಿ, ಪಠ್ಯವಸ್ತು ಸಿದ್ಧಪಡಿಸುವಲ್ಲಿ ಚಿಂತಿಸಬೇಕೆಂದು ಹೇಳಿದರು. ಮುಂಬರುವ ದಿನಗಳಲ್ಲಿ ಶಿಕ್ಷಕ ತನ್ನ ಸ್ಥರವನ್ನು ಉನ್ನತಿಕರಿಸಬೇಕು ಹಾಗೂ ಒಬ್ಬ ಗುರು ವಿದ್ಯಾರ್ಥಿ ಜೀವನದಲ್ಲಿ ತಾಯಿಯಾಗಿ, ತಂದೆಯಾಗಿ, ಸಂತನಾಗಿ ತ್ರಿವೇಣಿ ಸಂಗಮದ ಗುಣಗಳನ್ನಳವಡಿಕೊಂಡು ಭವ್ಯಭಾರತ ನಿರ್ಮಾಣದಲ್ಲಿ ಶ್ರೇಷ್ಠವಾದ ವೆಕ್ತಿಗಳನ್ನು ನಿರೂಪಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕೇಳಿಕೊಂಡರು.

 ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ದಯಾನಂದ ಅಗಸರ್ ರವರು ಅದ್ಯಕ್ಷೀಯ ನುಡಿಗಳನ್ನಾಡಿ ಮುಂಬರುವ ದಿನಗಳಲ್ಲಿ ಹೊಸ ರಾಷ್ಟೀಯ ಶಿಕ್ಷಣ ನೀತಿಯ ಅನುಷ್ಠಗೊಳಿಸುವಲ್ಲಿ ವಿಶ್ವವಿದ್ಯಾಲಯದಲ್ಲಿ ಗಂಭೀರವಾದ ಚಿಂತನೆ ನಡೆದಿದೆ ಎಂದು ತಿಳಿಸಿದೆ.

 ಶ್ರೀ ಶರಣಬಸಪ್ಪ ಕೊಟೆಪ್ಪಗೋಳ ಕುಲಸಚಿವರು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಇವರು ಎಲ್ಲರನ್ನು ಸ್ವಾಗತಿಸಿದರು. ಪ್ರೊ. ಹೂವಿನಬಾವಿ ಬಾಬಣ್ಣ ಅವರು ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಎನ್. ಬಿ. ನಡುವಿನಮನಿ ವೆಬಿನಾರಿನ ಸಂಘಟನಾ ಕಾರ್ಯದರ್ಶಿ ಇವರು ಕಾರ್ಯಕ್ರಮ ನಿರುಪಿಸಿದರು. ಕಾಲೇಜು ಶಿಕ್ಷಣ ವಿಭಾಗದ ಜಂಟಿ ನಿರ್ದೆಶಕರಾದ ಡಾ. ಶಿರಿಶ್‍ಕುಮಾರ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಾಣಿಜ್ಯ ನಿಕಾಯದ ಡೀನರಾದ ಪ್ರೊ. ಸಿ. ಎಸ್. ಬಸವರಾಜ, ಕಲಾ ನಿಕಾಯದ ಡಿನರಾದ ಪ್ರೊ. ಎಚ್. ಟಿ. ಪೋತೆ, ಕಾನೂನು ನಿಕಾಯದ ಡೀನರಾದ ಡಾ. ದೇವಿದಾಸ ಮಾಲೆ, ಪಿ. ಎಮ್. ಇ. ಬಿ. ನಿರ್ದೆಶಕರಾದ ಪ್ರೊ. ಜಿ. ಎಮ್. ವಿದ್ಯಾಸಾಗರ, ರಾಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಗುರು ಶ್ರೀರಾಮುಲು ಇವರುಗಳು ವಿವಿದ ವಿಷಯಗಳ ಮೇಲೆ ಚರ್ಚೆಯನ್ನಾರಂಭಿಸಿ ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡರು.

 ಕೊನೆಯದಾಗಿ ಮುಕ್ತಾಯ ಸಮಾರಂಭದಲ್ಲಿ ಡಾ. ಪಲ್ಲವಿ ವಿವೇಕ ಕಾರಂಜೆ, ಸಂಯೋಜಕರು ಭಾರತಿಯ ಶಿಕ್ಷಣ ಮಂಡಳಿ ಕರ್ನಾಟಕ ಉತ್ತರ ಪ್ರಾಂತನ ಕಲಬುರಗಿ ಜಿಲ್ಲಾ ಘಟಕ ಇವರು ಎಲ್ಲರನ್ನು ಸ್ವಾಗತಿಸಿದರು. ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮೀನಾ ಚಂದಾವರ್‍ಕರ್ ಅವರು ಮುಕ್ತಾಯ ಭಾಷಣ ಮಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಎಲ್ಲಾ ಶಿಕ್ಷಕರು ಹಾಗು ವಿವಿಧ ಮಹಾ ವಿದ್ಯಾಲಯಗಳಿಂದ ಸುಮಾರು 280 ಶಿಕ್ಷರು ವೆಬಿನಾರ್ ನಲ್ಲಿ ಸಕ್ರಿಯವಾಗಿ ಭಾಗವಹಿಸಿದರು.