ಬೀದರ, ಜು.29: ಬೀದರ ಜಿಲ್ಲೆಯ ಸಿಬಿಎಸ್‍ಸಿ ಶಾಲೆಗಳು 2020 ರ ಹೊಸ ಶಿಕ್ಷಣ ನೀತಿಯ ವಿವಿಧ ನಿಬಂಧನೆಗಳನ್ನು ಜಾರಿಗೆ ತರಲು, ಕಾರ್ಯಗತಗೋಳಿಸಲು ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡಿವೆ ಎಂದು ಬೀದರ ಕೇಂದ್ರೀಯ ವಿದ್ಯಾಲಯ ವಾಯು ಸೇನಾ ಶಿಬಿರದ ಪ್ರಾಚಾರ್ಯ ಮಿಥಿಲೇಶಕುಮಾರ ಹೇಳಿದರು.
ಅವರು ಗುರುವಾರ ಬೀದರನ ಕೇಂದ್ರೀಯ ವಿದ್ಯಾಲಯದ ವಾಯು ಸೇನಾ ಶಿಬಿರದ ಶಾಲೆಯಲ್ಲಿ ನಡೆದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಯಾಗಿ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ಮೂರು ವರ್ಷಗಳಲ್ಲಿ ಎಫ್‍ಎಲ್‍ಎನ್, ಜಾದು ಕಾ ಪಿಟಾರಾ, ವಿದ್ಯಾ ಪ್ರವೇಶ, ವಿದ್ಯಾಂಜಲಿ, ನಿಪುಣ, ಪರಾಖ್ ಮುಂತಾದ ಹೊಸ ಶೈಕ್ಷಣಿಕ ಮಧ್ಯಸ್ಥಿಕೆಗಳು, ಪ್ರೌಢ ತರಗತಿಯಲ್ಲಿ ಕೌಶಲ್ಯ ಶಿಕ್ಷಣ ಪರಿಚಯ, ಅಂತರಶಿಸ್ತೀಯ ಕೆಲಸಗಳು ಇತ್ಯಾದಿಗಳ ಮೂಲಕ ಚರ್ಚಿಸಲಾಗಿದೆ. ಮಧ್ಯಸ್ಥಗಾರರು ಸಿಬಿಎಸ್‍ಸಿ ಪ್ರದೇಶಿಕ ಕಛೇರಿ ಬೆಂಗಳೂರು ಆಶ್ರಯದಲ್ಲಿ ಜಿಲ್ಲೆಯ ಬೀದರನ ಸಿಬಿಎಸ್‍ಇ ಶಾಲೆಗಳು ತರಗತಿ ಕೊಠಡಿಗಳಲ್ಲಿ ಹೊಸ ಶೈಕ್ಷಣಿಕ ಮಧ್ಯಸ್ಥಿಕೆಗಳು ಭಾಷಾಂತರಿಸಲು ಅಗತ್ಯ ಕೌಶಲ್ಯಗಳೊಂದಿಗೆ ಶಿಕ್ಷಕರನ್ನು ಸಜ್ಜುಗೊಳಿಸಲು ಆಂತರಿಕ ತರಬೇತಿ ಹಾಗೂ ಕಾರ್ಯಾಗಾರ ಇತ್ಯಾದಿಗಳನ್ನು ನಡೆಸಿದೆ ಎಂದು ಹೇಳಿದರು.
ಶಿಕ್ಷಕರು ಹೊಸ ಶೈಕ್ಷಣಿಕ ಮಧ್ಯಸ್ಥಿಕೆಗಳ ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಮುಂಬರುವ ವರ್ಷಗಳಲ್ಲಿ ಸಂಪೂರ್ಣ ಬೋಧನಾ ಕಲಿಕಾ ಮಾದರಿಯು ಮೌಖಿಕ, ಸ್ಮøತಿ ಅಧಾರಿಕ ಕೌಶಲ್ಯ ಆಧಾರಿತ ಕೌಶಲ್ಯ ಅಧಾರಿತ ಕಲಿಕೆಯಿಂದ ನೈಜ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಬೇರೂರಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಮೂರು ವರ್ಷಗಳು ಪೂರ್ಣಗೊಂಡ ಸಂಭ್ರಮಕ್ಕಾಗಿ, ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ವಿದ್ಯಾಲಯ ಆವರಣದಲ್ಲಿ ಮರ ನೆಟ್ಟರು. ಎನ್‍ಇಪಿ ಶೈಕ್ಷಣಿಕ ಮಧ್ಯಸ್ಥಿಕೆಗಳ ವಿವಿಧ ಎಳೆಗಳನ್ನು ಪ್ರದರ್ಶಿಸವು ಚಿತ್ರಗಳ ಕೊಲಾಜ್ ಅನ್ನು ವಿದ್ಯಾಲಯದಲ್ಲಿ ಪ್ರದರ್ಶಿಸಲಾತು.
ಜಿಲ್ಲೆಯ ಬೀದರನ ಮತ್ತಷ್ಟು ಕೇಂದ್ರೀಯ ವಿದ್ಯಾಲಯ ಮತ್ತು ಜವಾಹರ ನವೋದಯ ವಿದ್ಯಾಲಯಗಳು ಎನ್‍ಇಪಿ ನಿಜವಾದ ಅಕ್ಷರ ಮತ್ತು ಉತ್ಸಾಹದಲ್ಲಿ ಕಾರ್ರ್ಯಗತಗೊಳಿಸಲು ಶಾಲೆಯ ಸಂಪನ್ಮೂಲಗಳನ್ನು ಇತರ ಶಾಲೆಗಳೊಂದಿಗೆ ಹಂಚಿಕೊಳ್ಳಲು ಯಾವಾಗಲು ಸಿದ್ದರಿರುತ್ತೆವೆ ಎಂದು ಸಹಯೋಗದ ವಿದ್ಯಾಲಗಳದವರು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯ, ದತ್ತಗಿರ ಮಹಾರಾಜ ಪಬ್ಲಿಕ ಶಾಲೆ, ಸೇರಿದಂತೆ ಬೀದರನ ವಿವಿಧ ಸಿಬಿಎಸ್‍ಸಿ ಶಾಲೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.