ಧಾರವಾಡ,ಜೂ.29: ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಕಿಟೆಲ್ ವಿಜ್ಞಾನ ಕಾಲೇಜಿನಲ್ಲಿ ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿ-2020 ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ” ಎಂಬ ವಿಷಯದ ಅಡಿಯಲ್ಲಿ ಅಂತರ ಮಹಾವಿದ್ಯಾಲಯಗಳ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಡಾ. ಎಸ್ ಎಂ. ತುವಾರ್ ಭಾರತದ ಇತಿಹಾಸದಲ್ಲಿ 4ನೇ ಮತ್ತು ಉತ್ತಮ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದ್ದು ವಿದ್ಯಾರ್ಥಿಗಳು ಇದರ ಸದಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ವೃತ್ತಿಪರ ತರಬೇತಿಯ ಹಾಗೆ ಬಿ.ಎಸ್ಸಿ. ಪದವಿ ಸಹ ಉತ್ತಮ ಜೀವನ ನಿರೂಪಿಸುವಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಹಾಗೂ ನಿರ್ಣಾಯಕ ಹಂತವಾಗಿದೆ ಎಂದು ಪ್ರಾಚಾರ್ಯರಾದ ಡಾ. ಆರ್ ಕ್ರಿಸ್ಟೋಫರ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಸ್ಪರ್ಧೆಯಲ್ಲಿ ಆಕಾಶ ಹಂಸನೂರ (ಪ್ರಥಮ) ಸ್ಥಾನವನ್ನು, ಕೀರ್ತಿದೊಡ್ಡುರ ( ದ್ವಿತೀಯ) ಪ್ರತೀಕ್ ಹೆಗ್ಡೆ, (ತೃತೀಯ) ಸ್ಥಾನ ಪಡೆದರು. .
ಈ ಕಾರ್ಯಕ್ರಮದಲ್ಲಿ ಕಿಟೆಲ್ ವಿಜ್ಞಾನ ಮಹಾವಿದ್ಯಾಲಯ, ಡಾ. ಜಿ.ಎಮ್ ಪಾಟೀಲ, , ಐಶ್ವರ್ಯ ಜೋರಾಪುರ . ಶಂಭುಲಿಂಗ, ಸಾರಿಕಾ ಜೋಗಳೆ ಇತರರಿದ್ದರು.