ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಗುರು ನಾನಕ ದೇವ್ ಪಬ್ಲಿಕ್ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ

ಬೀದರ:ನ.17:ಸರದಾರ ಜೋಗಾ ಸಿಂಗ್ ಅವರ ಸವಿನೆನಪಿನಗಾಗಿ ರಾಷ್ಟೀಯ ಶಿಕ್ಷಣ ನೀತಿ 2020ರ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೇಗಳನ್ನು ಗುರು ನಾನಕ ದೇವ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸರಕಾರ ಜಾರಿಗೆ ತಂದಿರುವಂತಹ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಬಹಳಷ್ಟು ಜನರಿಗೆ ಪರಿಚಯವಿರದ ಕಾರಣ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತಿಳಿಸುವುದರಿಂದ ಸಮಾಜದಲ್ಲಿ ಜಾಗೃತಿ ಮೂಡಿಸಿದಂತಾಗುತ್ತದೆ. ಏಕೆಂದರೆ ನಮ್ಮ ಭಾರತದಲ್ಲಿ ಹಿಂದಿನಿಂದ ಬಂದಂತಹ ಪಾರಂಪರಿಕ ಶಿಕ್ಷಣ ನೀತಿಯನ್ನು ನೆನದುಕೊಂಡು ಶಿಕ್ಷಣ ನಡೆಯುತ್ತಿದ್ದು, ಆದರೆ ಇಂದಿನ ಸ್ಪರ್ಧಾತ್ಮಾಕ ಯುಗದಲ್ಲಿ ಭಾರತ ವಿಶ್ವ ಗುರುವಾಗುವತ್ತ ಮುನ್ನುಗ್ಗುತ್ತಿದೆ, ಈ ಹೊಸ ಶಿಕ್ಷಣ ನೀತಿಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ವಿವಿಧ ಸ್ಪರ್ಧೇಗಳಾದ ಪ್ರಬಂಧ ಸ್ಪರ್ಧೇ ಹಾಗೂ ಚಿತ್ರಕಲೆಯನ್ನು ಹಮ್ಮಕೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬೀದರಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀ ಸೋಮಶೇಖರ ಹಂಚನಾಳೆ ಭಾಗವಸಿ ಮಾತನಾಡುತ್ತ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳಲ್ಲಿ ಹುಮ್ಮಸನ್ನು ಮೂಡಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ರೇಷ್ಮಾ ಕೌರ್ ಅವರು ಈ ಸ್ಪರ್ಧೇಗೆ ಚಾಲನೆ ನೀಡಿದರು. ಅವರು ಮಾತನಾಡುತ್ತ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ವಿಷಯಗಳ ಕುರಿತು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು. ಜೀವನದಲ್ಲಿ ಉತ್ತಮ ಗುರಿ ಸಧಿಸಲು, ಹಾಗೂ ದೇಶ ಅಭಿವೃದ್ದಿಯಾಗಲು ಹೊಸ ಶಿಕ್ಷಣ ನೀತಿ ಪೂರಕವಾಗಿದೆ ಎಂದು ಹೇಳಿದರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಈ ಶಿಕ್ಷಣ ನೀತಿಯ ಅರಿವು ಅತ್ಯವಶ್ಯಕವಾಗಿದೆ ಎಂದರು ತಿಳಿಸಿದರು.

ಡಾ|| ರಾಮಚಂದ್ರ ಗಣಪೂರ ಅವರು ಮಾತನಾಡುತ್ತ ಗುರು ನಾನಕ ದೇವ್ ಪಬ್ಲಿಕ್ ಶಾಲೆಯ ವತಿಯಿಂದ ಹಮ್ಮಿಕೊಂಡಂತಹ ಈ ಜಾಗೃತಿಯ ಕುರಿತು ಶಾಲೆಗೂ ಮತ್ತು ಸಂಪನ್ಮೂಲ ಶಿಕ್ಷಕರ ಕಾರ್ಯ ಶ್ಲಾಘನೀಯವಾದದ್ದು ಎಂದರು, ಮಕ್ಕಳು ವೇದಿಕೆಯನ್ನು ಸದುಪಯೋಗ ಬಡಿಸಿಕೊಂಡಾಗ ಜೀವನದಲ್ಲಿ ಅಪೂರ್ವ ಸಾಧನೆ ಮಾಡಲು ಸಾಧ್ಯವೆಂದರು.

ಇನ್ನೊರ್ವ ಅತಿಥಿಳಾದ ಡವನೀತಾ ಭಾಂಗೆ ಅವರು ಮಾತನಾಡುತ್ತ ವಿದ್ಯಾರ್ಥಿಗಳು ವಿವಿಧ ಸ್ಪರ್ಧೇಗಳಲ್ಲಿ ಭಾಗವಹಿಸುವ ಅವಶ್ಯಕತೆಯನ್ನು ಹೇಳಿದರು.

ಇನ್ನೊರ್ವ ಅತಿಥಿಗಳಾದ ಯೋಗೇಶ್ ಮಠ ಅವರು ಮಾತನಾಡುತ್ತ ಚಿತ್ರಕಲೆಯೂ ಸಹ ಕಲಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಬಿಆರ್‍ಸಿ ಶ್ರೀ ವಿಜಯಕುಮಾರ, ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಸರೀತಾ ಇಮಾನ್ವೆಲ್, ಸಂಯೋಜಕರಾದ ಶ್ರೀ ಸಂಜೀವ್ ಕುಮಾರ ಟಿಳ್ಳೆಕರ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.