ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಉತ್ತಮ ವ್ಯಕ್ತಿ ನಿರ್ಮಾಣ-ಡಾ.ಅಜೀತ್ ಸಬನೀಸ

ಸಿರವಾರ.ನ.೧೬-ಕೇವಲ ಓದು, ಅಂಕಗಳಿಸುವುದು, ಪರೀಕ್ಷೆ ಪಾಸಾಗುವುದು ಶಿಕ್ಷಣ ಅಲ್ಲ, ಶಿಕ್ಷಣದಿಂದ ಉತ್ತಮ ವ್ಯಕ್ತಿ ನಿರ್ಮಾಣ ವಾಗಬೇಕು, ಮುಂಬರುವ ರಾಷ್ಟ್ರೀಯ ಶಿಕ್ಷಣ ನೀತಿ ನಮಗೆ ನೀಡಲಿದೆ ಎಂದು ಅರವಿಂದ ಸೊಸೈಟಿ ನ ರಾಜ್ಯ ಸಮಿತಿ ಅಧ್ಯಕ್ಷ ಮತ್ತು ರಾಜ್ಯ ರಾಷ್ಟ್ರೀಯ ಶಿಕ್ಷಣ ನೀತಿಯ ರಾಜ್ಯ ಸಮಿತಿ ಸದಸ್ಯ ಡಾ.ಅಜೀತ ಸಬನೀಸ ಅವರು ಹೇಳಿದರು.
ಪಟ್ಟಣದ ಬಸವೇಶ್ವರ ಕಾಲೇಜಿನಲ್ಲಿ ಸೋಮವಾರ ’ವ್ಯಕ್ತಿತ್ವ ವಿಕಸನ, ಸಮಗ್ರ ಶಿಕ್ಷಣ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ’ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಕೆಲವರಿಗೆ ಶಿಕ್ಷಕರು ಹೇಳೋದು ಮೂಲಕ ತಿಳಿಯುತ್ತದೆ, ಇನ್ನು ಕೆಲವರಿಗೆ ವಿವರಣೆ ಮೂಲಕ, ಇನ್ನುಳಿದ ಕೆಲವರಿಗೆ ಪ್ರಯೋಗಾತ್ಮಾಕವಾಗಿ ತೋರಿಸಿದರೆ ಮಾತ್ರ ತಿಳಿಯುತ್ತದೆ ಮುಂಬರುವ ಶಿಕ್ಷಣ ನೀತಿಯು ಪ್ರತಿಯೊಬ್ಬರನ್ನು ಉತ್ತಮ ವ್ಯಕ್ತಿ ನಿರ್ಮಾಣಕ್ಕೆ ಸಹಕಾರಿಯಾಗುವಂತೆ ರೂಪಿಸಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಬೆಳೆಸುವ ರೀತಿಯಲ್ಲಿ ಶಿಕ್ಷಣ ನೀಡಬೇಕು, ನಾಯಕತ್ವ ಗುಣವು ಅಬ್ದುಲ್ ಕಲಾಂರಂತೆ ವಿಫಲವಾದರೆ ನಾನು, ಯಶಸ್ವಿ ಯಾದರೆ ಎಲ್ಲರೂ ಎನ್ನುವ ಮನಸ್ಥಿತಿ ಇದ್ದರೆ ಮಾತ್ರ ಉತ್ತಮ ನಾಯಕನಾಗಲು ಸಾಧ್ಯ ಎಂದರು.
ವಾಣಿಜ್ಯೋದ್ಯಮಿ ಚುಕ್ಕಿ ಸೂಗಪ್ಪ ಸಾಹುಕಾರ, ಕಾಲೇಜು ಅಧ್ಯಕ್ಷ ನರಸಿಂಹರಾವ್ ಕುಲಕರ್ಣಿ, ಅರವಿಂದ ಸೋಸೈಟಿಯ ಆದನಗೌಡ ಆಲ್ಕೋಡ್, ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಸಂಘದ ಕಾರ್ಯದರ್ಶಿ ಮಹಾಂತೇಶ ನಾಗಡದಿನ್ನಿ ಮಠ, ಅರಿಕೇರಿ ಮಲ್ಲಪ್ಪ ಸಾಹುಕಾರ, ಕೆ.ರಾಮರೆಡ್ಡಿ, ಕೆ.ಅನುಶ್ರೀ, ಕಾಲೇಜು ಪ್ರಾಚಾರ್ಯ ಡಾ.ಧರ್ಮಣ್ಣ, ಉಪನ್ಯಾಸಕರಾದ ಮುನ್ನಿ, ಚಂದ್ರಮತಿ, ಚಂದ್ರಕಲಾ, ವೈಜನಾಥ, ಪ್ರಶಾಂತ, ಅರವಿಂದ ಆಶ್ರಮದ ಆಧ್ಯಾತ್ಮಿಕ ಸಾಧಕರು, ಯುವಾ ಬ್ರಿಗೇಡ್, ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಸಂಘದ ಸ್ವಯಂ ಸೇವಕರು, ಕಾಲೇಜು ವಿದ್ಯಾರ್ಥಿಗಳು ಇದ್ದರು.