ರಾಷ್ಟ್ರೀಯ ಶಿಕ್ಷಣ ದಿನ ಆಚರಣೆ


ಹುಬ್ಬಳ್ಳಿ, ನ 12: ಸ್ವತಂತ್ರ ಭಾರತದ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಶಿಕ್ಷಣ ಕ್ಷೇತ್ರಕ್ಕೆ ಭದ್ರ ತಳಹದಿಯನ್ನು ರೂಪಿಸಿದವರು ಭಾರತ ರತ್ನ ಡಾ|| ಮೌಲಾನಾ ಅಬುಲ್ ಕಲಾಂ ಆಜಾದ್ ಅವರು. ಅವರ ಜನ್ಮ ದಿನವಾದ ನ. 11 ನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗುತ್ತದೆ ಎಂದು ಜೆಎಸ್‍ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದ ಫೆÇ್ರ.ಆರ್.ಬಿ. ದರ್ಗದ ಅವರು ಹೇಳಿದರು.
ನಗರದ ಟಿಪ್ಪು ಷಹೀದ ಪಾಲಿಟೆಕ್ನಿಕ್‍ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಉತ್ತಮವಾದ ಮತ್ತು ಸಮಾನವಾದ ಶಿಕ್ಷಣ ದೊರಕಿಸಿಕೊಡುವುದು ಅವರ ಧ್ಯೇಯವಾಗಿತ್ತು. ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣವನ್ನು ಪೆÇ್ರೀತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರು. ಮೌಲಾನಾ ಅಬುಲ್ ಕಲಾಂ ಆಜಾದರು ವಿಶ್ವ ವಿದ್ಯಾಲಯ ಧನಸಹಾಯ ಆಯೋಗ ರಚಿಸುವುದರ ಮೂಲಕ ಉನ್ನತ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿದ್ದರು. ಅವರು ಪುರುಷರ ಶಿಕ್ಷಣದಷ್ಟೇ ಪ್ರಾಮುಖ್ಯತೆಯನ್ನು ಸ್ತ್ರೀಯರ ಶಿಕ್ಷಣಕ್ಕೂ ನೀಡಿದ್ದರು. ಶೈಕ್ಷಣಿಕ ಅನುಕೂಲಕ್ಕಾಗಿ ಇಂಗ್ಲೀಷ ಭಾಷೆಯನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೇ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕೆಂದು ತಿಳಿಸಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಎಮ್. ಎಸ್. ಮುಲ್ಲಾ ಮಾತನಾಡಿ, ಭಾರತೀಯ ಶಿಕ್ಷಣ ನೀತಿಯ ವಾಸ್ತುಶಿಲ್ಪಿಯಾದ ಮೌಲಾನಾ ಅಬುಲ್ ಕಲಾಂ ಆಜಾದರು ಜ್ಞಾನ ವಿಜ್ಞಾನ ತಂತ್ರಜ್ಞಾನ ಇವುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಭಾರತದೆಲ್ಲಡೆ ತಾಂತ್ರಿಕ ಶಿಕ್ಷಣ ಜಾರಿಯಾಗಬೇಕೆಂಬ ಬಯಕೆ ಅವರಿಗಿತ್ತು. ಅವರ ಪ್ರಯತ್ನದಿಂದಲೇ ಖರಗಪುರ ಐ.ಐ.ಟಿ ತಾಂತ್ರಿಕ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು. ವಿಜ್ಞಾನ ತಂತ್ರಜ್ಞಾನ, ಶಿಕ್ಷಣ, ಆಡಳಿತ ಸಂಶೋಧನೆಗಳ ಕ್ಷೇತ್ರಗಳಲ್ಲಿ ಭಾರತ ಇಂದು ಅದ್ಬುತ ಪ್ರಗತಿ ಸಾಧಿಸಿದೆ ಎಂದರು.
ಸಿವಿಲ್ ವಿಭಾಗದ ಮುಖ್ಯಸ್ಥರಾದ ರವೀಂದ್ರ ಸಿಂಗ್ ಅತ್ತೆರ ಮತ್ತು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಜಿ.ಎಮ್. ಪುಡಕಲಕಟ್ಟಿಯವರು ಮೌಲಾನಾ ಅಬುಲ್ ಕಲಾಂ ಆಜಾದರ ಜೀವನ, ವಿಚಾರಧಾರೆ ಮತ್ತು ಅವರು ನಡೆದು ಬಂದ ದಾರಿ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದ ಉಪನ್ಯಾಸಕರಿಗೆ ಪಾರಿತೋಷಕವನ್ನು ನೀಡಿ ಸನ್ಮಾನಿಸಲಾಯಿತು.
ಜಿ. ಎಮ್. ಪುಡಕಲಕಟ್ಟಿ, ರವೀಂದ್ರ ಸಿಂಗ ಅತ್ತೆರ, ಮಸೂದ ಅಹ್ಮದ ಜುನೇದ, ಬಾಳೇಶ ಹೆಗ್ಗಣ್ಣವರ, ಎಮ್.ಹೆಚ್. ಧಾರವಾಡ ಎ.ಎಸ್.ಎ. ಮುಲ್ಲಾ ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಕಿರಣಕುಮಾರ ಮಂಟೂರ ನಿರೂಪಿಸಿದರು, ಎಮ್.ಎ. ಬಾಗಲಕೋಟ ಸ್ವಾಗತಿಸಿದರು ಮತ್ತು ಬಾಳೇಶ ಹೆಗ್ಗಣ್ಣವರ ವಂದಿಸಿದರು.