ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಚೇರಿ ಉದ್ಘಾಟನೆ

ಕಲಬುರಗಿ,ಜೂ.28:ನಗರದ ಹಳೆ ಜಿಲ್ಲಾ ಆಸ್ಪತ್ರೆ (ಜಿಮ್ಸ್) ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಿಸಲಾದ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಚೇರಿಯನ್ನು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ರಾಜಶೇಖರ ಮಾಲಿ ಅವರು ಉದ್ಘಾಟಿಸಿದರು.
. ನಂತರ ಅವರು ಮಾತನಾಡಿ, ಇಪ್ಪತ್ತು ವಯಸ್ಸಿನಿಂದ 50 ವರ್ಷದೊಳಗಿನವರಿಗೆ ಹೆಪಟೈಟಿಸ್-ಬಿ ಕಾಯಿಲೆ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಇದಕ್ಕೆ ವ್ಯಾಕ್ಸಿನ್ ಮಾಡಿಕೊಳ್ಳುವುದರ ಮೂಲಕ ಈ ರೋಗ ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಜಿಲ್ಲಾ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣಾಧಿಕಾರಿ/ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ|| ಚಂದ್ರಕಾಂತ ನರಬೋಳಿ ಅವರು ಹೆಪಟೈಟಿಸ್-ಬಿ ಲಕ್ಷಣಗಳು ಮತ್ತು ಹರಡುವ ವಿಧಾನ ಬಗ್ಗೆ ಮುಂಜಾಗ್ರತಾ ಕ್ರಮದ ಕುರಿತು ಮಾತನಾಡಿದರು.
ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ|| ಶಿವಕುಮಾರ ಎಸ್ ಅರ್, ಜಿಮ್ಸ್ ಆರ್. ಎಂ.ಓ. ಗಳಾದ ಡಾ. ಓಂ ಪ್ರಕಾಶ ಅಂಬೂರೆ, ಡಾ|| ನಾಗರಾಜ ಪಾಟೀಲ್, ಹೆಚ್‍ಓಡಿ ಫಿಡ್ರಟಿಕ್
ಡಾ|| ಸಂದೀಪ್, ಜಿಲ್ಲಾ ಸಮಾಲೋಚಕ ಮಂಜುನಾಥ ಕಂಬಾಳಿಮಠ ಸೇರಿದಂತೆ ಆರೋಗ್ಯ ಸಿಬ್ಬಂದಿಗಳು ಮತ್ತು ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳು ತರಬೇತಿ ಪಡೆದರು. ನೋಡಲ್ ಡಿಆರ್‍ಟಿಬಿ ವೈದ್ಯಾಧಿಕಾರಿ ಡಾ|| ಅವಿನಾಶ್ ಖಸಗೆ. ಡಿಪಿಸಿ ಅಬ್ದುಲ್ ಜಬ್ಬಾರ್, ಎಸ್‍ಟಿಎಸ್.ಶಿವಕುಮಾರ ಪಾಟೀಲ್ ಸ್ವಾಗತಿಸಿದರು. ಡಿಪಿಎಸ್ ಸುರೇಶ್ ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .