ಸಂಜೆವಾಣಿ ವಾರ್ತೆ
ಸಿರುಗುಪ್ಪ:ಜು,2- ಶ್ರೀ ವಾಸವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಪಟ್ಟಣದ ಐತಿಹಾಸಿಕ ದಾಖಲೆಯ ಶ್ರೀ ಗುರು ಕಾಡಸಿದ್ದೇಶ್ವರ ವಿದ್ಯಾ ಸಂಸ್ಥೆಯು, ವಿಭಿನ್ನ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಅಂತೆಯೇ ಜೂಲೈ 1 ರಂದು ಶನಿವಾರ ಶಾಲೆಯ ಆವರಣದಲ್ಲಿ ವೈದ್ಯರ ದಿನಾಚರಣೆ ನಡೆಸಲಾಯಿತು.
ವೈದ್ಯಕೀಯ ಲೋಕದ ಮೇಧಾವಿ ಡಾ. ಬಿದಾನ್ ಚಂದ್ರ ರಾವ್ ರವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ, ಬಳ್ಳಾರಿಯ ವಿಮ್ಸ್ ನ ಪ್ರಾಧ್ಯಾಪಕ ಪ್ರಸೂತಿ ತಜ್ಞ ಮತ್ತು ಸ್ತ್ರೀ ರೋಗ ತಜ್ಞ ಡಾ. ರಾಮರಾಜು ರವರು, ಮಕ್ಕಳಿಗೆ ಹದೆಹರೆಯದ ವಯಸ್ಸಿನ ಸಮಸ್ಯೆಗಳು ಮತ್ತು ಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷರೆಲ್ಲರು ವೈದ್ಯ ರಾಮರಾಜು ರವರಿಗೆ ಗೌರವ ಸನ್ಮಾನ ನೆರವೇರಿಸಿದರು.
ಸಂಸ್ಥೆಯ ಅಧ್ಯಕ್ಷ ಮಾರುತಿ, ಮುಖ್ಯೋಪಾಧ್ಯಾಯ ಅಲ್ಲಾಭಕ್ಷಿ ಮತ್ತು ಶಿಕ್ಷಕರು ಹಾಗೂ ಮಕ್ಕಳು ಇದ್ದರು.