ರಾಷ್ಟ್ರೀಯ ವುಮೆನ್ ಎಕ್ಸ್ ಲೆನ್ಸ್- 2023 ಪ್ರಶಸ್ತಿಗೆ ಭಾಜನರಾದ ದೀಪಾ ತಟ್ಟಿಮನಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.13: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪೆÇ್ರ. ಓಂಕಾರಗೌಡ ಕಾಕಡೆ ಅವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಮಾಡುತ್ತಿರುವ ಕು. ದೀಪಾ ತಟ್ಟಿಮನಿ ಅವರಿಗೆ ಸರಕಾರಿ ಮಾನ್ಯತೆ ಪಡೆದ ನವದೇಹಲಿಯ ಇಂಡಿಯನ್ ಗ್ಯಾಲಕ್ಸಿ ಫೌಂಡೇಶನ್ ವತಿಯಿಂದ ಕೊಡಮಾಡುವ ನ್ಯಾಷನಲ್ ವುಮೆನ್ ಎಕ್ಸ್ ಲೆನ್ಸ್–2023 ಪ್ರಶಸ್ತಿ ದೊರಕಿದೆ.
ಜ್ಞಾನದೀಪ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆಯಾಗಿ ಸುಮಾರು 5 ವರ್ಷಗಳಿಂದ ಇವರು ಸಲ್ಲಿಸಿದ ಸಮಾಜಸೇವೆ, ಮಹಿಳಾ ಸಬಲೀಕರಣಕ್ಕಾಗಿ ಸಲ್ಲಿಸಿದ ಸೇವೆ ಹಾಗೂ ಮಹಿಳಾ ಶಿಕ್ಷಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಜೊತೆಗೆ ಪತ್ರಕರ್ತೆಯಾಗಿಯೂ ಕಾರ್ಯನಿರ್ವಹಿಸಿದ ದೀಪಾ ಹಲವಾರು ಸಾಮಾಜಿಕ ಅಭಿವೃದ್ಧಿ ಲೇಖನಗಳನ್ನು ಬರೆದಿದ್ದಾರೆ ಅವರ ಈ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಮಾರಂಭದಲ್ಲಿ ಕೇಂದ್ರ ಸಚಿವ ಕಪಿಲ್ ಪಾಟೀಲ, ಲೋಕಸಭಾ ಎಂ.ಪಿ ನವನೀತ್ ರಾನಾ, ಡಾ.ಮನೀಶ್ ಗವಾಯಿ ಇನ್ನರ್ ವ್ಹೀಲ್ ಕ್ಲಬ್‍ನ ಮುಖ್ಯಸ್ಥೆ ಡಾ. ಉರ್ವಸಿ ಮಿತ್ತಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.