ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ,ಜು.20- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಲಬುರಗಿ ಶಾಖೆಯ ಆಶ್ರಯದಲ್ಲಿ ನಗರದ ಡಾ. ಬುಜುರ್ಕೆ ಅಕಾಡೆಮಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮಕ್ಕೆ ರಾಷ್ಟ್ರೋತ್ಥಾನ ಪರಿಷತ್ ನ ಜಿಲ್ಲಾ ಸಂಯೋಜಕರು ಭೀಮರಾಯ ಇಟಗೊಂಡ ಅವರು ಚಾಲನೆ ನೀಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 1949 ಜುಲೈ 09 ರಂದು ಅಧಿಕೃತವಾಗಿ ಸ್ಥಾಪನೆಯಾಯಿತು. ವಿದ್ಯಾರ್ಥಿ ಸಂಘಟನೆಯು ವಿದ್ಯಾರ್ಥಿಗಳ ಒಡನಾಡಿಯಾಗಿದ್ದು,ಯಾವುದೇ ವಿದ್ಯಾರ್ಥಿಗಳ ಸಮಸ್ಯೆಗಳನ್ನೂ ತಕ್ಷಣವೇ ಬೀದಿಗಿಳಿದು ಹೋರಾಟ ಮಾಡುವುದೆ ವಿದ್ಯಾರ್ಥಿ ಪರಿಷತ್ತಿನ ಕಾರ್ಯ ಕೇವಲ ಹೋರಾಟ ಒಂದೇ ಅಲ್ಲ ಹೋರಾಟದ ಜೊತೆಗೆ ಸಾಮಾಜಿಕ ಕಾರ್ಯ , ವ್ಯಕ್ತಿ ವಿಕಾಸನದಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ದೇಶಭಕ್ತಿ ಮೂಡಿಸುವ ಕಾರ್ಯದಲ್ಲಿ ಎಬಿವಿಪಿ ಸದಾ ಮುಂದೆ ಎಂದು ಅವರು ಹೇಳಿದರು.
ಕ್ಯಾತಪ್ಪ ಮೇದಾ ಅವರು ನಿರೂಪಿಸಿದರು,ಕಲಬುರ್ಗಿ ನಗರದ ಂಃಗಿP ಉಪಾಧ್ಯಕ್ಷ ಡಾ. ಶಿವರಾಜ್ ಬುಜುರ್ಕೆ ಸ್ವಾಗತಿಸಿದರು, ಭಾಗ್ಯಶ್ರೀ ವಂದಿಸಿದರು.ಈ ಸಂದರ್ಭದಲ್ಲಿ ಎಬಿವಿಪಿ ಕಲಬುರಗಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಧನಂಜಯ್ ಜೀ ಎಬಿವಿಪಿ ವಿಭಾಗ ಸಂಚಾಲಕರಾದ ಅಭಿಷೇಕ ಬಾಳೆ ಸ್ವಾಮಿ ವಿವೇಕಾನಂದ ಕಾಲೇಜಿನ ಅಧ್ಯಕ್ಷರಾದ ಎಂಎಚ್ ಬೆಳಮಗಿ ಸರ್ ಹಾಗೂ ಅಕಾಡೆಮಿಯ ಸರ್ವ ಉಪನ್ಯಾಸಕರ ವೃಂದ ಹಾ ವಿದ್ಯಾರ್ಥಿಗಳು ಇದ್ದರು.