ಬೀದರ:ಜು.10:ನಗರದ ಎ.ಬಿ.ವಿ.ಪಿ. ಕಾರ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 75ನೇ ವರ್ಷದ ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯನ್ನು ಧ್ವಜಾರೋಹಣ ಹಾಗೂ ಸಸಿ ನೆಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಸಂತೋಷ ಹಂಗರಗಿ, ನಗರ ಸಂಘಟನಾ ಕಾರ್ಯದರ್ಶಿ ಹೇಮಂತ, ಜಿಲ್ಲಾ ಸಂಚಾಲಕ ಶಶಿಕಾಂತ ರ್ಯಾಕಲೆ, ನಗರ ಕಾರ್ಯದರ್ಶಿ ಅಂಬ್ರೇಶ ಬಿರಾದಾರ, ಕಾರ್ಯಕರ್ತರಾದ ಸಿದ್ಧಾರ್ಥ ಭಾವಿದೊಡ್ಡಿ, ಲಕ್ಷ್ಮಿಕಾಂತ, ಮಹೇಶ, ಶಿವಕುಮಾರ, ಸಿದ್ದೇಶ್ವರ ಸ್ವಾಮಿ, ನಿತಿಶ ಶಿಂಧೆ, ಆನಂದ ಅಮದಾಬಾದೆ, ದರ್ಶನ ಭಾವಿದೊಡ್ಡಿ, ಸಚಿನ ಇನ್ನೀತರರು ಉಪಸ್ಥಿತರಿದ್ದರು.