ರಾಷ್ಟ್ರೀಯ ವಿಜ್ಞಾನ ದಿನ : ವಸ್ತು ಪ್ರದರ್ಶನ

ಸಂಜೆವಾಣಿ ವಾರ್ತೆ
ಸಿಂಧನೂರು.ಫೆ.೨೯- ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ‘ವಿಜ್ಞಾನ ವಸ್ತು ಪ್ರದರ್ಶನವನ್ನು’ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಏರ್ಪಡಿಸಲಾಗಿತ್ತು .
ಈ ಒಂದು ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯರುಗಳಾದ ಸಮತ ಶರ್ಮ ಹಾಗೂ ಬಸವರಾಜ್ ಜಿ. ಅವರು ಉಪಸ್ಥಿತರಿದ್ದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬರುವಂತಾಗಬೇಕು, ಹೊಸದನ್ನು ಸೃಷ್ಟಿ ಮಾಡುವಂತಹ ಕೌಶಲ್ಯ ಮಕ್ಕಳಲ್ಲಿ ಬೆಳೆಸಬೇಕು ಎಂಬ ಮಾತುಗಳನ್ನಾಡಿದರು. ಅದಲ್ಲದೆ ಈ ಕಾರ್ಯಕ್ರಮದಲ್ಲಿ ಅಗಸ್ತ್ಯ ಫೌಂಡೇಶನ್ ಕಡೆಯಿಂದ ಸುಮಾರು ವಿಜ್ಞಾನ ಮಾದರಿಗಳನ್ನು ಮಕ್ಕಳಿಂದಲೇ ವೀಕ್ಷಣೆ ಮಾಡಿಸಿ ವಿವರಿಸಿದರು. ಇದರಲ್ಲಿ ಕೆಲವು ಮಾದರಿಗಳು ಸ್ವತಹ ಮಕ್ಕಳೆ ತಯಾರಿಸಿದ್ದರು ಅಲ್ಲದೆ, ಈ ಒಂದು ಕಾರ್ಯಕ್ರಮದಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಮುಖ್ಯಸ್ಥರು ಶಿವಗೇನಪ್ಪ ಕೋಮನೂರು ಹಾಗೂ ಎರಡು ಶಾಲೆಯ ವಿಜ್ಞಾನ ಶಿಕ್ಷಕರಾದ ಖಾಜಾಬನ್ನಿ ರೇಷ್ಮಾ ಹಾಗೂ ಮೇಘಶಾಮ್ ಕಮ್ಮಾರ್ ಹಾಗೂ ಎಲ್ಲಾ ವಿಷಯಗಳ ವಿಷಯವಾರು ಶಿಕ್ಷಕರು ಉಪಸ್ಥಿತರಿದ್ದರು.