ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

ವಿಜಯಪುರ:ಮಾ.1: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ಶೀಲಾ ಬಿರಾದಾರ ಅವರು ಸರ್ ಸಿ.ವಿ.ರಾಮನ್‍ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡುತಾ ್ತವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕು. ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು. ಇಂದು ವೈಜ್ಞಾನಿಕ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಇದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸಾಧನೆಯನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನವನ್ನು ಮಾಡಿದರು. ಕುಮಾರಿ ಪ್ರೇರಣಾ ಅಂಬಿಗೇರ, ಶ್ರೀರಕ್ಷಾ ಪಟ್ಟಣಶೆಟ್ಟಿ ಮತ್ತು ವೈಷ್ಣವಿ ಜಮಾದಾರ ವಿಜ್ಞಾನ ವಿಷಯದ ಕುರಿತು ಮಾತನಾಡಿದರು. ಸಹ ಶಿಕ್ಷಕರಾದ ಶಶಿಧರ ಲೋನಾರಮಠ ಮಾತನಾಡಿದರು.
ಪ್ರಾಚಾರ್ಯರಾದ ಶ್ರೀಧರ ಕುರಬೇಟ ಶುಭಾಶಯ ಕೊರಿದರು. ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಸವಿತಾ ಪಾಟೀಲ, ಹೀನಾ ಕೌಸರ, ಈಶ್ವರ ಪೂಜಾರಿ, ಎ ಎಚ್ ಸಗರ, ಅನಿಲಕುಮಾರ ಬಾಗೇವಾಡಿ, ತಬಸ್ಸುಮ್ , ಮೊಹಸೀನಾ, ಅಶ್ವೀನ್, ಶ್ರೀದೇವಿ, ಸುರೇಖಾ ಪಾಟೀಲ್, ಬಸವರಾಜ ರೆಬಿನಾಳ, ಸರೋಜಾ ಕರಕಳ್ಳಿ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಶ್ವೇತಾ ಪಾಟೀಲ್ ನಿರೂಪಿಸಿದರು, ಕವಿತಾ ನಿಂಬರಗಿ ವಂದಿಸಿದರು.