ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ದಾವಣಗೆರೆ: ಕಕ್ಕರಗೊಳ್ಳದ ಪಟೇಲ್ ವೀರಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಸ್ಟೇಡಿಯಂ, ಅಥ್ಲೆಟಿಕ್ಸ್ ಕೋರ್ಟ್, ಸ್ಕೌಟ್ಸ್ ಅಂಡ್ ಗೈಡ್‌ನ ಬಿಡಾರಗಳು, ವೀಕ್ಷಣ ಗೋಪುರ, ಸಾಲುಮರದ ತಿಮ್ಮಕ್ಕನನ್ನು ಪ್ರತಿಬಿಂಬಿಸುವ ಹಾಗೂ ಪ್ರೇರೇಪಿಸುವ ಮಾದರಿಗಳು, ಕನ್ನಡ, ಇಂಗ್ಲಿಷ್ ಹಾಗು ಹಿಂದಿ ವಿಭಾಗಗಳ ವಿವಿಧ ಮುಖ್ಯ ಕವಿಗಳ ಹಾಗೂ ಲೇಖನಕಾರರ ಕಿರುಪರಿಚಯಗಳು, ವಿಜಯನಗರ ಸಾಮ್ರಾಜ್ಯದ ವೈಭವವನ್ನು ಎತ್ತಿ ತೋರಿಸುವ ಮಾರುಕಟ್ಟೆಯ ಮಾದರಿಗಳು ಈಜಿಪ್ಟ್‌ನ ಪಿರಮಿಡ್‌ಗಳು, ವಿಶ್ವವಿದ್ಯಾನಿಲಯದ ಮಾದರಿಗಳು ಅತ್ಯಂತ ಆಕರ್ಷಣೀಯವಾಗಿದ್ದವು. ಶಾಲೆಯ ಎಲ್‌ಕೆಜಿಯಿಂದ ೯ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.