
ಗದಗ, ಮಾ. 4 : ನಮಗೆ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಅತ್ಯಂತ ಅಗತ್ಯತೆಗಳಾಗಿದ್ದು ಪರಿಸರ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವ ಹಾಗೂ ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಧ್ಯೇಯದೊಂದಿಗೆ ವಿದ್ಯಾರ್ಥಿಗಳನ್ನು ಬೆಳೆಸಬೇಕಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬೇಲೇರಿ ಹೇಳಿದರು.
ಅವರು ಗದಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗಿಮಡಿಯಲ್ಲಿ ಜರುಗಿದ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಹಾಗೂ ಜೀವನದ ನಡುವೆ ಅವಿನಾಭಾವ ಸಂಬಂಧವಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.
ಮುಖ್ಯ ಅತಿಥಿ ಸಿ.ಆರ್.ಪಿ ರೇಶ್ಮಾ ಬೆನಗಿ ಮಾತನಾಡಿ ವೈಜ್ಞಾನಿಕ ಯುಗದಲ್ಲಿ ಮನುಷ್ಯ ಸಾಧನೆಯ ಮೆಟ್ಟಿಲೇರಿದ್ದು, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ವೈಜ್ಞಾನಿಕ ಮನೋಭಾವನೆಯೊಂದಿಗೆ ಮುನ್ನಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಆರ್.ಬಿ.ಸಂಕಣ್ಣವರ ಮಾತನಾಡಿ, ವಿಜ್ಞಾನದ ಕೊಡುಗೆಯಾಗಿರುವ ತಂತ್ರಜ್ಞಾನವು ಕಂಪ್ಯೂಟರ್ ಹಾಗೂ ಅಂತರ್ಜಾಲ ಇಂದು ಹಾಸುಹೊಕ್ಕಾಗಿದೆ. ವಿದ್ಯಾರ್ಥಿಗಳು ಹೊಸ ಹೊಸ ಅವಿಷ್ಕಾರಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ವರ್ಷಾ ಬಸವಾ ಹಾಗೂ ಚೈತ್ರಾ ಕಂದಗಲ್ಲ ಪ್ರಾರ್ಥಿಸಿದರು, ಸ್ಪಂದನಾ ವೇರ್ಣೆಕರ, ಪಲ್ಲವಿ ಅಂಗಡಿಮಠ ವಿಜ್ಞಾನದ ಅವಿಷ್ಕಾರ ಕುರಿತು ಮಾತನಾಡಿದರು. ಎಸ್.ಜಿ.ಗಿರಿತಮ್ಮಣ್ಣವರ ಸ್ವಾಗತಿಸಿದರು, ವಿ.ಆರ್,ಹಂಸಿ ನಿರೂಪಿಸಿದರು, ಸಿ.ಎಸ್.ಬೆಳಹಾರ ಮತ್ತು ಐ.ಡಿ.ಕಬ್ಬೇರಹಳ್ಳಿ ನಿರ್ವಹಿಸಿದರು, ಆರ್.ಡಿ.ಮಗಜಿ ಮತ್ತು ಆರ್.ಬಿ.ಹಾದಿಮನಿ ಪರಿಚಯಿಸಿದರು, ಡಿ.ಎಸ್.ಮೀಶೇಣವರ ವಂದಿಸಿದರು.
ಆಕಾಶÀ ದೊಡ್ಡಮನಿ, ಸುನೀಲ ಬದಿ, ಸ್ವಾಮಿನಾಥ ವೇರ್ಣೆಕರ, ರೋಹಿತ ದೊಡ್ಡಅಮ್ಲಪ್ಪನವರ ವಿಜ್ಞಾನದ ವಿವಿಧ ಪ್ರಯೋಗಗಳನ್ನು ಸಾದರಪಡಿಸಿದರು.