ರಾಷ್ಟ್ರೀಯ ವಿಜ್ಞಾನ ದಿನಾಚರಣೆ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 4: ತಾಲೂಕಿನ ಸುಶೀಲಾನಗರದಲ್ಲಿ ಪ.ಜಾತಿ ಮುರಾರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯರು ಕೆ.ಎಸ್. ಖಜರ್ಗಿ ಮಕ್ಕಳಿಂದ ವಿಜ್ಞಾನ ವಿಷಯದ ಚಿತ್ರಕಲಾ ಸ್ಪರ್ಧೆ, ವಸ್ತು ಪ್ರದರ್ಶನ ನೇರವೇರಿತು, ಮಕ್ಕಳು ಶಾಲೆಯಲ್ಲಿ ತಾವೇ ಸ್ವತ: ತಯಾರಿಸಿದ ವಿಜ್ಞಾನದ ವಿವಿಧ ಮಾದರಿಗಳನ್ನು ಶಾಲಾ ಅವರಣದಲ್ಲಿ ಪ್ರದರ್ಶಿಸಿದರು. 6 ರಿಂದ 10ನೇ ತರಗತಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ವಿಜ್ಞಾನ ಶಿಕ್ಷಕಿ ಶೋಭಾ ಸ್ವಾಗತಿಸಿದರು, ಉಮೇಶ್ ಗಣಿತ ಶಿಕ್ಷಕ ನಿರೂಪಿಸಿದರು, ನಾಗೇಶ್ ವಂದಿಸಿದರು, ಮಹಾಂತೇಶ್, ನಿಲಯ ಪಾಲಕ ಧನುಂಜಯ ರುಕ್ಮೀಣಿ ಶಾಂತ ಸುರೇಶ್ ಇತರರು ಉಪಸ್ಥಿತರಿದ್ದರು.