ರಾಷ್ಟ್ರೀಯ ವಿಚಾರ ಸಂಕಿರಣ

ಧಾರವಾಡ,ಜು31: ಭೋಧನೆ, ಸಂಶೋಧನೆ ಮತ್ತು ಪ್ರಕಟಣೆ ಇವು ಅಧ್ಯಯನ ವಿಭಾಗದ ನಿರಂತರ ಚಟುವಟಿಕೆಗಾಳಗಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಅಶೋಕ ಶೆಟ್ಟರ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗವು ಇತ್ತೀಚೆಗೆ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಭಾಂಗಣದಲ್ಲಿ ಅಕ್ಷರ ಫೌಂಡೇಶನ್ ಇವರ ಸಹಯೋಗದಲ್ಲಿ ಡಾ. ರವಿ ಕೊರಿಶೆಟ್ಟರ್ ಅವರ ಅಭಿನಂದನಾ ಸಮಾರಂಭ ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ಎಸ್. ವಾಯ್. ಮುಗಳಿ ಅವರ ಪ್ರಾಧ್ಯಾಪಕ ವೃತ್ತಿಯಲ್ಲಿ 25 ವಸಂತಗಳನ್ನು ಪೂರೈಸಿದ ಅಂಗವಾಗಿ “ವಿರಾಸತ್- ದ ಲೆಗಸಿ ಆಫ್ ಅವರ್ ಡಿಪಾಟ್ಮೆರ್‍ಂಟ್” ಎಂಬ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕವಿವಿಯಲ್ಲಿ ಇತಿಹಾಸ ವಿಭಾಗವು ಸ್ಥಾಪನೆಯಾಗಿ ಕಳೆದ 63 ವರ್ಷಗಳಲ್ಲಿ 19 ಪ್ರಾಧ್ಯಾಪಕರು ಕಾರ್ಯನಿರ್ವಹಿಸಿದ್ದು ಎಲ್ಲರೂ ರಾಷ್ಟ್ರೀಯ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತನಾಮರಾದವರ ಕೊಡುಗೆ ಬಹಳ ಇದೆ ಎಂದು ಅವರ ಸಾಧನೆಯನ್ನು, ಹಿರಿಮೆಯನ್ನು ಕುರಿತು ಸ್ಮರಿಸಿದರು.
ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಶಿವರುದ್ರ ಕಲ್ಲೋಳಿಕರ ಮಾತನಾಡಿ ಪೆÇ್ರ. ಜಿ.ಆರ್. ರಂಗಸ್ವಾಮಿ ಮತ್ತು ಪೆÇ್ರ. ಕುಪ್ಪುಸ್ವಾಮಿ ಅವರ ಕೃತಿಗಳ ಕುರಿತು ಬೆಳಕು ಚೆಲ್ಲಿದರು.
ಇದೆ ಸಂದರ್ಭದಲ್ಲಿ ಪೆÇ್ರ. ರವಿಕೊರಿಶೆಟ್ಟರ್ ಮತ್ತು ಪ್ರಾಧ್ಯಾಪಕ ವೃತ್ತಿಯಲ್ಲಿ 25 ವಸಂತಗಳನ್ನು ಪೂರೈಸಿ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡ ಪೆÇ್ರ. ಎಸ್.ವಾಯ್. ಮುಗಳಿ ಅವರನ್ನು ಸನ್ಮಾನಿಸಲಾಯಿತು.
ಅದೇ ಸಂದರ್ಭದಲ್ಲಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಪ್ರಾಧ್ಯಾಪಕರ ಕುರಿತು ಹಲವಾರು ನಿವೃತ್ತ ಪ್ರಾಧ್ಯಾಪಕರುಗಳು ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್.ಸಿ. ನಾಟಿಕರ, ಪೆÇ್ರ. ರವಿ ಕಾಂಬಳೆ, ಪೆÇ್ರ. ಸಂಗೀತಾ ಮಾನೆ. ಡಾ. ಅನಸೂಯಾ ಕಾಂಬಳೆ, ಪೆÇ್ರ. ಎಸ್.ಎಸ್. ಭರಡಿ, ಡಾ. ಸತೀಶ ಜಾಧವ, ಡಾ. ಕೆ.ಡಿ. ಪೂಜಾರ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಜರಿದ್ದರು.