ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ 1311 ಪ್ರಕರಣಗಳು ಇತ್ಯರ್ಥ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಮಾ.17;ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಡೆದ ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ಹರಪನಹಳ್ಳಿ ಉಭಯ ನ್ಯಾಯಾಲಯಗಳಲ್ಲಿ  ಆಯೋಜಿಸಿದ್ದಲಾಗಿದ್ದ ರಾಷ್ಟಿçÃಯ ಲೋಕ ಆದಾಲತ್‌ನಲ್ಲಿ ನಡೆದ ಒಟ್ಟು 1604 ಪ್ರಕರಣಗಳನ್ನು ಕೈಗೆತ್ತಿಕೊಂಡು, 1311 ಪ್ರಕರಣಗಳನ್ನು ಉಭಯ ನ್ಯಾಯಾಲಯದ ನ್ಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕೀರವ್ವ ಕೆಳಗೇರಿರವರ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.ಪಟ್ಟಣದ ಉಭಯ ನ್ಯಾಯಾಲಯದಲ್ಲಿ ನಡೆದ ರಾಷ್ಟಿçÃಯ ಲೋಕ ಆದಾಲತ್ನಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಜಮೀನು ವಿವಾದ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು, ನಿವೇಶನ ಮಾರಾಟ ಒಳಗೊಂಡAತೆ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಭಾರತಿ ರವರ ನ್ಯಾಯಾಲಯದಲ್ಲಿ ಒಟ್ಟು 700 ಪ್ರಕರಣಗಳ ಪೈಕಿ 593 ಪ್ರಕಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು 45,56,190 ಲಕ್ಷ. ರೂ.ಗಳು ರಸ್ತೆ ಅಫಘಾತ ಸೇರಿದಂತೆ ಇತರೆ ಪ್ರಕರಣಗಳಿಂದ ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು.ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ರವರ ನ್ಯಾಯಾಲಯದಲ್ಲಿ ಒಟ್ಟು 904 ಪ್ರಕರಣಗಳ ಪೈಕಿ 718 ಪ್ರಕಣಗಳನ್ನು ಇತ್ಯರ್ಥ ಪಡೆಸಿ, ಒಟ್ಟು 40,84,072 ಲಕ್ಷ ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡೆಸಿದರು. ಉಭಯ ನ್ಯಾಯಾಲದಲ್ಲಿ ಒಟ್ಟು 1311 ಪ್ರಕರಣ ಜೊತೆ ಉಭಯ ನ್ಯಾಯಾಲಯಗಳಿಂದ ಒಟ್ಟು;- 86,40,262 ರೂ.ಗಳ ಮೊತ್ತವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮತ್ತು ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಮಾರು ವರ್ಷಗಳಿಂದ ಬಿರುಕು ಗೊಂಡಿದ್ದ ದಾಂಪತ್ಯ ಜೀವನದ ಜೋಡಿಗಳನ್ನು ಪರಸ್ಪರ ಹೊಂದಾಣಿಕೆ ಮಾಡಿಸಿ, ಮನವೊಲಿಸಿದ ನಂತರ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳು ಬಿರುಕು ಗೊಂಡಿದ್ದ ದಾಂಪತ್ಯ ಜೀವನವನ್ನು ಮತ್ತೆ ಜೊತೆ ಗುಡಿಸುವಲ್ಲಿ ಯಶ್ವಸಿಯಾದರು.