ರಾಷ್ಟ್ರೀಯ ಲೋಕ ಅದಾಲತ್: 227 ಪ್ರಕರಣ ವಿಲೇವಾರಿ 7.10 ಕೋಟಿ ರೂ. ಪರಿಹಾರ ಮಂಜೂರು

ಕಲಬುರಗಿ:ಜು.10:ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ 227 ಪ್ರಕರಣ ವಿಲೇವಾರಿಗೊಳಿಸಿ ಒಟ್ಟು 7.10 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ಮಂಜೂರು ಮಾಡಲಾಗಿದೆ.
ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಮೋಟಾರ ವಾಹನ ವಿಮೆ ಮತ್ತು ಸಿವಿಲ್ ಪ್ರಕರಣಗಳನ್ನು ಹೈಕೋರ್ಟ್ ಸಂಚಾರಿ ಪೀಠದಲ್ಲಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯತು.
ಈ ಲೋಕ ಅದಾಲತ್‍ನಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಎಮ್. ಶ್ಯಾಮಪ್ರಸಾದ, ನ್ಯಾಯಮೂರ್ತಿ ಆರ್. ನಟರಾಜ್ ಹಾಗೂ ಉಮೇಶ ಎಮ್. ಅಡಿಗ ಅವರು ಉಪಸ್ಥಿತರಿದ್ದರು.