ರಾಷ್ಟ್ರೀಯ ಲೋಕ ಅದಾಲತ್ ಪ್ರಕರಣ ಇತ್ಯರ್ಥ

ಸಂಜೆವಾಣಿ ವಾರ್ತೆ
ಶ್ರೀರಂಗಪಟ್ಟಣ:ಮಾ.17:- ಪಟ್ಟಣದಲ್ಲಿ ವಿವಿಧ ನ್ಯಾಯಾಲಯಗಳಲ್ಲಿದ್ದ ಹಲವು ಪ್ರಕರಣಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಮೂಲಕ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಿ ಒಟ್ಟು 1839ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
ಇದರಲ್ಲಿ 1176 ಪ್ರಕರಣಗಳು ಕ್ಷುಲ್ಲಕ ಕಾರಣಗಳ ಸಣ್ಣ ಸಣ್ಣ ಪ್ರಕರಣಗಳಾಗಿದ್ದು, ತಮ್ಮ ಗ್ರಾಮಗಳಲ್ಲಿ ಹಲವು ಕಾರಣಗಳಿಗೆ ಪ್ರಕರಣದಲ್ಲಿ ಭಾಗಿಯಾಗಿಯಾದ ಎರಡು ಕಡೆಯ ಕಕ್ಷಿದಾರರುಗಳಿಗೆ ಈ ಲೋಕ ಅದಾಲತ್ ನಡೆಯುವ ಕಾರ್ಯಕ್ರಮದಲ್ಲಿ ರಾಜಿ ಸಂಧಾನದ ಮೂಲಕ ಎರಡು ಕಡೆಯ ಕಕ್ಷಿದಾರರಿಗೆ ಮತ್ತೊಮ್ಮೆ ಇಂತಹ ಪ್ರಕರಣಗಳಿಗೆ ಭಾಗಿಯಾಗ
ದಂತೆ ವಕೀಲರ ಮೂಲಕ ತಿಳುವಳಿಕೆ ನೀಡಿ ಎರಡು ಕಡೆಯವರಿಂದ ಮುಚ್ಚಳಿಕೆ ಬರೆಸಿ ಸಮಕ್ಷಮದಲ್ಲಿ ಈ ಪ್ರಕರಣಗಳನ್ನು ನ್ಯಾಯಾಧೀಶರು ಇತ್ಯರ್ಥಪಡಿಸಿದ್ದಾರೆ.
ಇದಲ್ಲದೆ ಹಲವಾರು ವರ್ಷಗಳಿಂದ ನ್ಯಾಯಾಲಯದಲ್ಲಿ (ಪೆಂಡಿಂಗ್)ಹಿಂದುಳಿದಿದ್ದ ಪ್ರಕರಣಗಳು ಈಗೆ ಮುಂದುವರೆದುಕೊಂಡು ಬಂದಿದ್ದು ಈ ಪ್ರಕರಣಗಳನ್ನು ಎರಡು ಬದಿಯ ಕಕ್ಷಿದಾರರ ವಕೀಲರ ಸಹಕಾರದಲ್ಲಿ ಅವರ ವಕೀಲರ ಮೂಲಕ ನ್ಯಾಯಾಧೀಶರು ಇತ್ಯರ್ಥಪಡಿಸಿದ್ದಾರೆ.
ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದ ಫಲಾನುಭವಿಗಳು ಲೋಕ ಅದಾಲತ್ ಮೂಲಕ ಭಾಗವಹಿಸಿ ಬ್ಯಾಂಕಿಗೆ ಕಟ್ಟಬೇಕಿದ್ದ ಸಾಲದ ಹಣವನ್ನು ಕಡಿಮೆ ದರದಲ್ಲಿ ಫಲಾನನುಭವಿಗಳಿಗೆ ಹೊರೆಯಾಗದಂತೆ ನ್ಯಾಯಾಧೀಶರ ಮೂಲಕ ಬ್ಯಾಂಕ್ ಗಳಿಗೆ ಮರು ಪಾವತಿ ಮಾಡಿಸಿ ಈ ಮೇಲಿನ ಪ್ರಕರಣಗಳನ್ನು ನ್ಯಾಯಾಧಿಶರು ಇತ್ಯಾರ್ಥ ಪಡಿಸಿದ್ದಾರೆ. 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗೋಪಾಲ ಕೃಷ್ಣ ರೈ ಪಿ., ಪ್ರಧಾನ ಹಿರಿಯ ಸಿವಿಲ್‍ಯಾಧೀಶರಾದ ರೂಪ.ಎಂ.ಡಿ.ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧಿಶರಾದ ಮಹದೇವಪ್ಪ ಎಚ್. ಪ್ರಧಾನ ಕಿರಿಯ ಸಿವಿಲ್ ನ್ಯಾಯಾಲಯದ ದೇವರಾಜು ವೈಎಚ್., ಅಪರ ಕಿರಿಯ ಸಿವಿಲ್ ನ್ಯಾಯಾಲಯ ಹನುಮಂತ
ರಾಯಪ್ಪ ಬಿ.ಆರ್, ಅವರು ಲೋಕಾ ಅದಾಲತ್ ಕಾರ್ಯಕ್ರಮ ನಡೆಸಿ ,
5 ನ್ಯಾಯಾಲಯಗಳಿಂದ ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ವಕೀಲರ ಸಂಘದ ಕಾರ್ಯದರ್ಶಿ ಪವನ್‍ಗೌಡ, ಖಜಾಂಚಿ, ವಿನಯ್ ಸೇರಿದಂತೆ ಹಲವು ಮಂದಿ ಹಿರಿಯ ವಕೀಲರುಗಳು ಭಾಗಿಯಾಗಿ ಪ್ರಕರಣಗಳ ಇತ್ಯರ್ಥಕ್ಕೆ ಸಾಥ್ ನೀಡಿದರು.