ರಾಷ್ಟ್ರೀಯ ರೈತರ ದಿನಾಚರಣೆ-ಸನ್ಮಾನ


ರಾಯಚೂರು.ಡಿ.೨೪- ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ’ ಎಂಬ ನಾಣ್ನುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದಕ್ಕೆ ರೈತನ ಶ್ರಮದ ಬೆವರೇ ಮುಖ್ಯ ಕಾರಣ. ಇಂತಹ ರೈತನಿಗೆ ನಾವೆಲ್ಲರೂ ಕೃತಜ್ಞರಾಗಿರಬೇಕು.
ರಾಷ್ಟ್ರೀಯ ರೈತರ ದಿನದ ಅಂಗವಾಗಿ ಅಖಿಲ ಕರ್ನಾಟಕ ವಿಜಯೇಂದ್ರ ಸೇನೆ ರಾಯಚೂರು ವತಿಯಿಂದ ಇಂದು ಬಡ ರೈತರಿಗೆ ಗೌರವಗಳೊಂದಿಗೆ ಮಲಾರ್ಪಣೆ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ. ವಿನೋದಗೌಡ ಚಾಗಲ್, ನವೀನ್ ಕುಮಾರ್ ಮಾನ್ವಿ, ಪಂಪನಗೌಡ, ಮಂದಕಲ್, ಮಹೇಶ ಬೆಳಗುಂದಿ ಗಬ್ಬೂರು, ರವಿ ಪಾಟೀಲ್ ಗಣೇಕಲ್.ಬಿ ಗಿರೀಶ ಮಡಿವಾಳ್ ಅಸ್ಕಿಹಾಳ್, ನವೀನ್ ಪಾಟೀಲ್ ಮಂಜುನಾಥ್ ಪಾಟೀಲ್ ಯಕ್ಲಾಸಪೂರ್, ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.