ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ


ಧಾರವಾಡ, ಫೆ.19: ಧಾರವಾಡ ಪೂರ್ವ ವಿಭಾಗದ ಸಾರಿಗೆ ಇಲಾಖೆ ಕಚೇರಿಯಲ್ಲಿ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಆಚರಿಸಲಾಯಿತು.
ರಾಜ್ಯದಾದ್ಯಂತ ಸಡಕ್ ಸುರಕ್ಷಾ ಜೀವನ ರಕ್ಷಾ ಎಂಬ ದ್ಯೇಯದೊಂದಿಗೆ ಪ್ರಸಕ್ತ ಸಾಲಿನ ರಸ್ತೆ ಸುರಕ್ಷತಾ ಅಭಿಯಾನವನ್ನು ಆಚರಿಸಲಾಗುತ್ತಿದ್ದು, ಉತ್ತರ ವಲಯದ ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಕೇಂದ್ರ ಸರ್ಕಾರವು ಹೊರಡಿಸಿರುವ ನಿರ್ದೇಶನದಂತೆ ಅಪಘಾತ ಸಂಭವಿಸಿದಲ್ಲಿ ಗಾಯಾಳುಗಳನ್ನು ಮೊದಲ ಒಂದು ಗಂಟೆಯೊಳಗೆ (ಗೋಲ್ಡನ್‍ಅವರ್ನಲ್ಲಿ) ಆಸ್ಪತ್ರೆಗೆ ದಾಖಲು ಮಾಡಿದಲ್ಲಿ ಅಥವಾ ಪೆÇಲೀಸ್ ಇಲಾಖೆಗೆ ತಿಳಿಸಿಬೇಕೆಂದು ಹೇಳಿದರು.
ಧಾರವಾಡ (ಪೂರ್ವ) ಕಛೇರಿ ಆರ್.ಟಿ.ಓ. ಅಪ್ಪಯ್ಯ ನಾಲತ್ವಾಡಮಠ ಇವರು ಮಾತನಾಡಿ, ಪ್ರಜ್ಞಾವಂತರಾದ ನಾವೆಲ್ಲರೂ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು, ಸಂಚಾರಿ ನಿಯಮಗಳನ್ನು ಪಾಲನೆ ಮಾಡಿ, ಏಕಾಗ್ರತೆಯಿಂದ ವಾಹನ ಚಾಲನೆ ಮಾಡಿದಲ್ಲಿ ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಸಬಹುದೆಂದು ತಿಳಿಸಿದರು.
ಜ.19 ರಿಂದ ಫೆ.18 ರವರೆಗೆ ಧಾರವಾಡ (ಪೂರ್ವ) ಮತ್ತು ಪಶ್ಚಿಮ ಕಛೇರಿ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ 32ನೇ ರಸ್ತೆ ಸುರಕ್ಷತಾ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ವರದಿ ವಾಚನವನ್ನು ಜಿ.ವಿ. ದಿನಮಣಿ ಹಾಗೂ ಪಿ.ಆರ್. ದೇಸಾಯಿರವರು ಮಾಡಿದರು. ಶೋಧಾ ಟಯೋಟಾ ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ಸ್ಟೀಕ್ಕರ್ಸ್ ಹಾಗೂ ಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಧಾರವಾಡ ಪೂರ್ವ ಆರ್.ಟಿ.ಓ ಬಿ.ಶಂಕ್ರಪ್ಪ, ಮಲ್ಲಿಕಾರ್ಜುನ ಕಪ್ಪರ, ಅರುಣ ಕಟ್ಟಿಮನಿ, ಎಂ.ಎಫ್. ಬನಹಟ್ಟಿ, ಲಕ್ಷ್ಮೀ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.