ರಾಷ್ಟ್ರೀಯ ರಕ್ತ ನಾಯಕ್ ಪ್ರಶಸ್ತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.04: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ರಕ್ತದಾನ ಶಿಬಿರದ ಜಾಗೃತಿ ಮತ್ತು ಸಂಘಟನೆಗಾಗಿ  ಹರಿಯಾಣದಲ್ಲಿ ನಡೆದ ರಾಷ್ಟ್ರ ಮಟ್ಟದ ಸಮ್ಮೇಳನದಲ್ಲಿ ಬಳ್ಳಾರಿ ಲಿಯಾ ಸೊಸೈಟಿ ಮತ್ತು ಭಾರತೀಯ ವೈಟ್ ಕ್ರಾಸ್ ಟ್ರಸ್ಟ್‌ಗೆ ರಾಷ್ಟ್ರೀಯ ರಕ್ತ ನಾಯಕ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಹರಿಯಾಣದ ಮುಖ್ಯಮಂತ್ರಿ ಎಸ್.ಎಚ್. ಮನೋಹರ್ ಲಾಲ್ ಮುಖ್ಯ ಅತಿಥಿಯಾಗಿ ಎಸ್.ಎಚ್. ಸಿಬಾಶ್ ಕಬಿರಾಜ್ , ಡಾ.ಅಶ್ವಿನಿ ಶೆಟ್ಟಿ, ಎಸ್.ಎಚ್.ಪ್ರೀತ್ಪಾಲ್ ಸಿಂಗ್ ಪನ್ನು ಇವರು  ಲಿಯಾ  ಸಂಸ್ಥೆಯ ಅಧ್ಯಕ್ಷ ಆರ್.ಕೆ. ಅಬ್ರಹಾಂ ಮತ್ತು ಇಂಡಿಯನ್ ವೈಟ್ ಕ್ರಾಸ್ ಟ್ರಸ್ಟ್‌ನ ಸಂಜು ಅವರಿಗೆ ಪ್ರಶಸ್ತಿ ನೀಡಿದ್ದಾರೆ.