ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ ಅಸ್ತಿತ್ವಕ್ಕೆ

ಚಿತ್ರದುರ್ಗ: ಮಾ.13; ಒಂದು ಸಂಸ್ಥೆ ಅಥವಾ ಸಂಘಟನೆಯ ನಾಯಕತ್ವ ವಹಿಸಿಕೊಳ್ಳುವವನು ಇತರರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣ ಹೊಂದಿರಬೇಕು ಆಗ ಮಾತ್ರ ನಾಯಕತ್ವಕ್ಕೆ ಅಥವಾ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಬೆಲೆ ಬರುತ್ತದೆ ಕೇವಲ ವಯಸ್ಸಿನಿಂದ ಯಾರೂ ಹಿರಯನೆನೆಸಿಕೊಳ್ಳುವುದಿಲ್ಲ ಕಿರಿಯರನ್ನು ಬೆಳೆಸುವವನು ಹಿರಿಯನೆನೆಸಿಕೊಳ್ಳುತ್ತಾನೆ ನಿಜವಾದ ಯೋಗ ಸಾಧಕನಾದವನಿಗೆ ಅಂತಹ ಗುಣ ಸಿದ್ದಿಸುತ್ತದೆ ” ಎಂದು ಯೋಗಗುರು ಚಿನ್ಮಯಾನಂದಜೀ ಅಭಿಪ್ರಾಯ ಪಟ್ಟರು.ಅವರು  ನಗರದ ಜೆಸಿಆರ್ ಬಡಾವಣೆಯ ಪ್ರಸನ್ನಗಣಪತಿ ದೇವಸ್ಥಾನ ಆವರಣದಲ್ಲಿ ಕೃಷಿಕರಾದ ಮುಸಂಡಿಹಾಳ್ ಬಸವರಾಜ್ ಎಲ್.ಎಸ್. ಹಾಗೂ ಪ್ರಸನ್ನಕುಮಾರ್ ಸಾರ್ವಜನಿಕ ಆರೋಗ್ಯ ಸೇವೆಗಾಗಿ ಸ್ಥಾಪಿಸಿರುವ ರಾಷ್ಟ್ರೀಯ ಯೋಗ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜ್ಞಾನ ಭಾರತಿ ಯೋಗ ಕೇಂದ್ರದ ಶಿಕ್ಷಕ ಕೆಂಚವೀರಪ್ಪ, ಎಂ.ಆರ್.ಮಂಜುನಾಥ್, ನಂದಪ್ಪ ಮಾಸ್ಟರ್, ಜೆಸಿಅರ್ ಗಣಪತಿ ದೇವಸ್ಥಾನ  ಸಮಿತಿ ಕಾರ್ಯದರ್ಶಿ ಮುರುಗೇಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.