ರಾಷ್ಟ್ರೀಯ ಯುವ ದಿನಾಚರಣೆ

ಬೀದರ:ಜ.14: ತಾಲೂಕಿನ ಆಣದೂರ ಗ್ರಾಮದ ಸರ್ವಜ್ಞ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗ್ರಾಮ ವಿಕಾಸ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ 158 ನೇ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೀದರಿನ ಶ್ರೀಮತಿ ಲಕ್ಷ್ಮಿಬಾಯಿ ಕಮಠಾಣೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಾಗಮ್ಮ ಪಾಟೀಲ್ “ಸ್ವಾಮಿ ವಿವೇಕಾನಂದರು ಜಗತ್ತಿನ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ವಿವೇಕಾನಂದರ ಜನ್ಮದಿನವಾದ ಜನೆವರಿ 12 ರಂದು “ರಾಷ್ಟ್ರೀಯ ಯುವ ದಿನವೆಂದು ಆಚರಿಸಲಾಗುತ್ತಿದೆ. ಭಾರತವಲ್ಲದೆ ವಿಶ್ವದ ಅನೇಕ ಮಹಾನ್ ವ್ಯಕ್ತಿಗಳ ಮೇಲೆ ಇವರ ಪ್ರಭಾವ ಕಾಣುತ್ತೇವೆ. ವಿವೇಕಾನಂದರು ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ವಿರೋಧಿಸಿದರು. ಸ್ವಾತಂತ್ರ್ಯ ಮತ್ತು ಸ್ವದೇಶಿ ಮಂತ್ರಕ್ಕೆ ಗಟ್ಟಿ ದ್ವನಿಯಾಗಿ ಹೊರಹೊಮ್ಮಿದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಗ್ರಾಮ ವಿಕಾಸ ಟ್ರಸ್ಟನ್ ಅಧ್ಯಕ್ಷ ಬಸವರಾಜ ಬಶೆಟ್ಟಿಯವರು ‘ವಿವೇಕಾನಂದರು ಭಾರತವು ವಿಶ್ವಗುರು ಸ್ಥಾನದಲ್ಲಿ ಮತ್ತೊಮ್ಮೆ ರಾರಾಜಿಸುವ ಚಿಂತನೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ದೀನ ದಲಿತರ, ಬಡವರ, ದರಿದ್ರರ ಹಕ್ಕಿಗಾಗಿ ದ್ವನಿ ಎತ್ತಿದ್ದರು. ಅದರಲ್ಲೂ ನವ ಭಾರತ ನಿರ್ಮಾಣಕ್ಕೆ ಯುವಕರ ಪಾತ್ರ ಮುಖ್ಯವಾಗಿದೆ ಎಂದು ಮನಗಂಡಿದ್ದ ವಿವೇಕಾನಂದರು ತಮ್ಮ ಭಾಷಣಗಳಲ್ಲಿ ಯುವ ಜನತೆ ಮತ್ತು ದೇಶವನ್ನು ಕೇಂದ್ರಿಕರಿಸುತ್ತಿದ್ದರು. ಭಾರತದ ಆತ್ಮ ‘ಆದ್ಯಾತ್ಮಿಕ ಶಕ್ತಿ’ ಎಂದು ಬೋಧಿಸಿದರು ಸಾಮಾಜಿಕ ಸಾಮರಸ್ಯದ ಮಹತ್ವವನ್ನು ಸಾರಿದರು. ಹಿಂದೂ ಸಮಾಜದ ವಕ್ತಕರಾಗಿ ಮಾತನಾಡಿದ್ದು ಸ್ವಾಮಿ ವಿವೇಕಾನಂದರ ವೈಶಿಷ್ಟ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸರ್ವಜ್ಞ ಪ್ರೌಢಶಾಲೆಯ ಮುಖ್ಯಗುರು ಕು. ಅಶ್ವಿನಿ ದಾಸ ಮಾಡಿದರೆ, ನಿರೂಪಣೆಯನ್ನು ಸಹ ಶಿಕ್ಷಕಿ ದೀಪಿಕಾ ಪಿಂಜರೆ, ವಂದನಾರ್ಪಣೆಯನ್ನು ವಿದ್ಯಾರ್ಥಿನಿ ವೈಶಾಲಿ ರೇವಣಪ್ಪಾ ಮಾಡಿರುವರು.
ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಶಾಲೆಯ ಸಿಬ್ಬಂದಿ ಪೀಟರ್ ಗೀತಾ, ತ್ರಿಶಲಾ, ರೇಣುಕಾ ಹುಗಾರ, ಮಹೇಶ ಮಡಿವಾಳ ಉಪಸ್ಥಿತರಿದ್ದರು.