(ಸಂಜೆವಾಣಿ ವಾರ್ತೆ)
ವಿಜಯಪುರ:ಜು.12: ಜು. 9 ರಂದು ಗದಗಿನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ನಗರದ ವಿಜಯಪುರ ಯುಥ ಮಾರ್ಷಲ್ ಆಟ್ರ್ಸ ಕರಾಟೆ ಪಟುಗಳು ಸಾಧನೆ ಮಾಡಿದ್ದಾರೆ, ಕುಮಟೆ ವಿಭಾಗದಲ್ಲಿ 7 ಚಿನ್ನ, 8 ಬೆಳ್ಳಿ, 19 ಕಂಚಿನ ಪದಕ ಹಾಗೂ ಕಟಾ ವಿಭಾಗದಲ್ಲಿ 4 ಚಿನ್ನ, 11 ಬೆಳ್ಳಿ, 59 ಕಂಚಿನ ಪದಕ ಗೆಲ್ಲುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ
ಕರಾಟೆ ಪಟುಗಳ ಸಾಧನೆಗೆ ಮೆಚ್ಚಿ ವಿಜಯಪುರ ಯುಥ ಮಾರ್ಷಲ್ ಆಟ್ರ್ಸ ಕಾರ್ಯದರ್ಶಿಯಾದ ಪ್ರೇಮಾನಂದ ನಾಗರೇಶಿ, ತರಬೇತುದಾರರಾದ ಅಕ್ಷಯ ಹಿರೇಮಠ, ಸಾಗರ ರಾಠೋಡ, ಹೈದರಲಿ ಮುಳ್ಳಾಲ, ರಾಮಚಂದ್ರ ಸೂರ್ಯವಂಶಿ, ಪವಿತ್ರಾ ಮಡ್ಡೆಪ್ಪಗೊಳ, ಪ್ರವೀಣ ವಾಲಿ ಹರ್ಷ ವ್ಯಕ್ತಪಡಿಸಿದರು.