
(ಸಂಜೆವಾಣಿ ವಾರ್ತೆ)
ವಿಜಯಪುರ :ಅ.1: ಬೆಂಗಳೂರಿನಲ್ಲಿ ನಡೆದ ಇಂಡಿಪೆಚಿಡೆನ್ಸ್ ಕಪ್ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಿಜಯಪುರ ನಗರದ ಬೆಸ್ಟ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಚಿiÀು ಕರಾಟೆ ಪಟುಗಳು ಸಾಧನೆ ಮಾಡಿದ್ದಾರೆ. ಕುಮಟೆ ವಿಭಾಗದಲ್ಲಿ 10 ಪದಕ ಹಾಗೂ ಕಟಾ ವಿಭಾಗದಲ್ಲಿ 10 ಪದಕ ಗೆಲ್ಲುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕುಮಟೆ ವಿಭಾಗದಲ್ಲಿ : ಪ್ರಥಮ ಸ್ಥಾನದಲ್ಲಿ ಅರುಣ, ಉದಯ, ಗುರುದಾಸ, ಜಗದೀಶ, ಶಿವರಾಜ, ಸಮರ್ಥ ದ್ವಿತೀಯ ಸ್ಥಾನದಲ್ಲಿ ಸಿದ್ಧಾಂತ ತೃತೀಯ ಸ್ಥಾನದಲ್ಲಿ ಮನೋಜ, ರೋನಕ್, ಪುಷ್ಪಾಶ್ರೀ ಪದಕ ಪಡೆದಿದ್ದಾರೆ.
ಕಟಾ ವಿಭಾಗದಲ್ಲಿ : ಪ್ರಥಮ ಸ್ಥಾನದಲ್ಲಿ ಪುಪ್ಪಾಶ್ರೀ, ಸಿದ್ಧಾಂತ್, ಅರುಣ, ಉದಯ, ಜಗದೀಶ, ಸಮರ್ಥ, ದ್ವಿತೀಯ ಸ್ಥಾನದಲ್ಲಿ ರೋನಕ್ ಪದಕ ಪಡೆದಿದ್ದಾರೆ.
ಕರಾಟೆ ಪಟುಗಳು ಸಾಧನೆಗೆ ಮೆಚ್ಚಿ ವಿಜಯಪೂರ ನಗರದ ಬೆಸ್ಟ್ ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ಮುಖ್ಯ ತರಬೇತುದಾರರಾದ ಜಗದೀಶ ಗುಳೇದಗುಡ್ಡ ಹರ್ಷ ವ್ಯಕ್ತಪಡಿಸಿದ್ದಾರೆ.