ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ


ಶಿವಮೊಗ್ಗ ಜುಲೈ 21; ಮೀನುಗಾರಿಕೆ ಇಲಾಖೆ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ  ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಯನ್ನು ಆಚರಿಸಲಾಯಿತು.
    ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆನರಾ ಬ್ಯಾಂಕ್ ಪ್ರಾಂತೀಯ ಕಚೇರಿಯ ಸೀನಿಯರ್ ಮ್ಯಾನೇಜರ್ ಮನೋಹರ್ ಮಾತನಾಡಿ, ಮೀನುಗಾರಿಕೆ ಚಟುವಟಿಕೆಗಳಿಗೆ ಬ್ಯಾಂಕ್‍ಗಳಿಂದ ದೊರೆಯುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು.ಕರ್ನಾಟಕ ರಾಜ್ಯ ಸಹಕಾರಿ ಮೀನು ಮಹಾಮಂಡಳ ಮೈಸೂರಿನ ನಿರ್ದೇಶಕ ರಾಮಯ್ಯ ಮಾತನಾಡಿ, ಮೀನುಗಾರರು ಮತ್ತು ಮೀನು ಕೃಷಿಕರು ಇಲಾಖೆಯಿಂದ ದೊರೆಯುತ್ತಿರುವ ಯೋಜನೆಗಳ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿ,ಪಂ ಉಪಕಾರ್ಯದರ್ಶಿ ಎಂ.ಕೆ.ತೊದಲಬಾಗಿ ಮಾತನಾಡಿ, ಪ್ರಚೋದಿತ ಮೀನುಮರಿ ಉತ್ಪಾದನೆಯಲ್ಲಿನ ಯಶಸ್ಸು ಭಾರತದಲ್ಲಿನ ಮೀನುಗಾರಿಕೆ ಕ್ಷೇತ್ರದಲ್ಲಿ ನೀಲಿ ಕ್ರಾಂತಿಗೆ ಪ್ರೇರಕವಾಗಿರುವ ಅಂಶ ಎಂದು ತಿಳಿಸಿದರು.
     ಮೀನುಗಾರಿಕೆ ಉಪನಿರ್ದೇಶಕ ಜಿ.ಎಸ್.ಷಡಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ ಇಲಾಖಾ ಯೋಜನೆಗಳ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 2022-23 ನೇ ಸಾಲಿನಿಂದ ಇಲಾಖಾ ಕೆರೆಗಳ ಮೀನುಪಾಶುವಾರು ಹಕ್ಕಿನ ವಿಲೇವಾರಿಯನ್ನು ಇ-ಟೆಂಡರ್ ಮೂಲಕ ಮಾಡಬೇಕಿರುವ ಪ್ರಕ್ರಿಯೆ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಲಾಯಿತು.
     ಕಾರ್ಯಕ್ರಮದಲ್ಲಿ ಮೀನುಗಾರಿಕೆ ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ, ಮೀನುಗಾರರು ಮತ್ತು ಮೀನು ಮರಿ ಪಾಲನೆದಾರರು ಭಾಗವಹಿಸಿದ್ದರು. ಮೀನುಗಾರಿಕೆ ಸಹಾಯಕ ನಿರ್ದೇಶಕ ರಾಘವೇಂದ್ರ ಕೆ.ಎಸ್ ಕಾರ್ಯಕ್ರಮ ನಿರ್ವಹಿಸಿದರು.