ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನ


ರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಗೃತಿ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ದೇಶದಲ್ಲಿ ಮಾನವ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು, 2016ನೇ ಸಾಲಿನಲ್ಲಿ ದೇಶದಲ್ಲಿ ಎಂಟು ಸಾವಿರ ಮಾನವ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ

ಮಾನವ ಕಳ್ಳಸಾಗಣೆಯಲ್ಲಿ ಹೆಚ್ಚಾಗಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಕಳ್ಳತನ ಮಾಡಿ ನಂತರ ಲೈಂಗಿಕ ಶೋಷಣೆ ಹಾಗೂ ಗುಲಾಮರನ್ನಾಗಿ ಬಳಸಲಾಗುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಮಕ್ಕಳ ಸಾಗಣೆ ತಡೆಗಟ್ಟುವಲ್ಲಿ ಎಲ್ಲರೂ ಜಾಗೃತರಾಗಬೇಕು

ಪ್ರತಿಯೊಬ್ಬರು ಕಾನೂನು ಅರಿವು ಹೊಂದಿರಬೇಕು. ಯಾರು ಕಾನೂನು ಪಾಲನೆ ಮಾಡುತ್ತಾರೆ ಅವರಿಗೆ ಕಾನೂನು ಸದಾ ರಕ್ಷಾ ಕವಚದಂತೆ ನಿಲ್ಲುತ್ತದೆ. ಎಲ್ಲರೂ ಕಾನೂನು ಗೌರವಿಸುವುದನ್ನು ಮರೆಯಬಾರದು. ಮಾನವ ಕಳ್ಳಸಾಗಣೆ ಎಂಬುದು ಇಂದು ಜಗತ್ತಿನ ಬಹುದೊಡ್ಡ ಪಿಡುಗಾಗಿದೆ. ಇದಕ್ಕೆ ಭಾರತ ಕೂಡ ಹೊರತಲ್ಲ. ಅದರಲ್ಲೂ ಭಾರತದಲ್ಲಿ ನಡೆಯುವ ಅಪರಾಧ ಕೃತ್ಯಗಳಲ್ಲಿ ಮಾನವ ಕಳ್ಳಸಾಗಣೆ ಎರಡನೇ ಸ್ಥಾನದಲ್ಲಿದೆ.

ಲೈಂಗಿಕ ಕ್ರಿಯೆಗೆ ಬಲವಂತವಾಗಿ ದೂಡುವ ಸಲುವಾಗಿ ಮಹಿಳೆಯರು ಮತ್ತು ಹದಿಹರೆಯದ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತದೆ. ಒಂದು ಮೂಲಗಳ ಪ್ರಕಾರ ಈ ಮಾನವ ಕಳ್ಳಸಾಗಣೆ ಕೃತ್ಯಕ್ಕೆ ಕೋಟ್ಯಾಂತರ ಮಹಿಳೆಯರು, ಹುಡುಗಿಯರು ಬಲಿಯಾಗುತ್ತಿದ್ದಾರೆ.
ಫ್ರಿ ಎ ಗರ್ಲ್ ಫೌಂಡೇಷನ್ ವರದಿ ಪ್ರಕಾರ ನಾಗಪುರದ ರೆಡ್ ಲೈಟ್ ಏರಿಯಾದಲ್ಲಿ 700 ರಿಂದ 800 ಹುಡುಗಿಯರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಯರ್ಟ್ಸ್ ಅಧ್ಯಯನದ ಪ್ರಕಾರ ಭಾರತದಲ್ಲಿ 2 ಕೋಟಿ ಮಂದಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರೆ 1.6 ಕೋಟಿ ಮಹಿಳೆಯರು ಮತ್ತು ಬಾಲಕಿಯರು ಲೈಂಗಿಕ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ. ಲೀಗಲ್ ಸರ್ವೀಸ್ ಇಂಡಿಯಾ ಪ್ರಕಾರ ಪ್ರತಿ ಗಂಟೆಗೆ ನಾಲ್ಕು ಹುಡುಗಿಯರನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಅಂಕಿಅಂಶಗಳ ಪ್ರಕಾರ, 2016ರಲ್ಲಿ 1100 ಕೇಸ್, 2018ರಲ್ಲಿ 2278, 2019ರಲ್ಲಿ 2208, 2020ರಲ್ಲಿ 1714 ಮಾನವ ಕಳ್ಳಸಾಗಣೆ ಕೇಸ್ ಗಳು ದಾಖಲಿಸಲಾಗಿದೆ. ಅಪ್ರಾಪ್ತವಯಸ್ಕರು, ಮಹಿಳೆಯರು, ಯುವಜನರನ್ನು ಸಹ ಮಾನವ ಕಳ್ಳಸಾಗಾಣಿಕೆ ಸಮಸ್ಯೆಗೆ ತಳ್ಳುತ್ತಿದೆ. ಮಹಿಳೆಯರು, ಮಕ್ಕಳು ದುರ್ಬಲ ವರ್ಗದವರಾಗಿದ್ದು, ಅವರು ಮೋಸದ ಬಲೆಗೆ ಸುಲಭವಾಗಿ ಬೀಳುವ ಸಾದ್ಯತೆ ಇದ್ದು ಅವರನ್ನು ರಕ್ಷಿಸುವುದು ಅವಶ್ಯಕವಾಗಿದೆ.

ಮಾಲೀಕರು, ಸಾಗಾಣಿಕೆದಾರರು ಮತ್ತು ಅಪರಾಧಿ ಜಾಲಗಳು ಮನೆಕೆಲಸ, ಸುಳ್ಳು ಮದುವೆ, ಗುಪ್ತ ಉದ್ಯೋಗಗಳು ಹಾಗೂ ಸುಳ್ಳು ದತ್ತುಗಳಂತಹ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಮಾನವ ಕಳ್ಳ ಸಾಗಾಣಿಕೆಗೆ ಒತ್ತಾಸೆಯಾಗಿ ನಿಂತಿದ್ದಾರೆ. ಲೈಂಗಿಕವಾಗಿ ಹಾಗೂ ಆರ್ಥಿಕ ಅಸಹನೀಯವಾದ ಹಾಗೂ ಶೋಷನೀಯ ಪರಿಸ್ಥಿತಿಗೆ ಮಹಿಳೆಯರು ಹಾಗೂ ಮಕ್ಕಳನ್ನು ಬಲತ್ಕಾರದಿಂದ ಸಾಗಣೆಕೆ ಮಾಡುತ್ತಿದ್ದಾರೆ

ಸಾರ್ವಜನಿಕರು ಕೂಡ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕ ತಡೆಗಟ್ಟಲು ನೆರವಾಗಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಹಿಳೆ ಮತ್ತು ಮಕ್ಕಳನ್ನು ಸಾಗಾಟ ಮಾಡುವ ವ್ಯಕ್ತಿಗಳ ಚಲನವಲನ ವೀಕ್ಷಿಸಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದರೆ, ಹತ್ತಿರದ ಪೊಲೀಸ್‌ ಠಾಣೆಗೆ ತಿಳಿಸಬೇಕು.ಯಾರಾದರೂ ಅಪರಿಚಿತ ವ್ಯಕ್ತಿಗಳು ಆಸೆ ಆಮಿಷಗಳನ್ನು ಒಡ್ಡಿ ನಂಬಿಸಿ ವಂಚಿಸುವ ಸಾಧ್ಯತೆ ಇರುತ್ತದೆ. ಮೋಸದ ಬಲೆಗೆ ಬಲಿಯಾಗಬಾರದು.ಪ್ರತಿಯೊಬ್ಬರು ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆಯ ಅರಿವನ್ನು ಹೊಂದಿರಬೇಕು. ಯುನೈಟೆಡ್ ಸ್ಟೇಟ್ಸ್ ಸೆನೆಟ್ 2007 ರಲ್ಲಿ ರಾಷ್ಟ್ರೀಯ ಮಾನವ ಸಾಗಣಿಕೆ ಜಾಗೃತಾ ದಿನ ಜನವರಿ 11 ಗೊತ್ತುಪಡಿಸಿದ.