ರಾಷ್ಟ್ರೀಯ ಮಾಧ್ಯಮ ಸಮ್ಮೇಳನ : ಮೌಂಟ್ ಅಬುಗೆ ತೆರಳಿದ ಬೀದರ ಪತ್ರಕರ್ತರ ನಿಯೋಗ

ಬೀದರ : ಅ.29:ಜಗತ್ತಿನ 150ಕ್ಕೂ ಅಧಿಕ ದೇಶಗಳಲ್ಲಿ 10,000 ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯ ಸೇವಾ ಕೇಂದ್ರಗಳ ಪ್ರಧಾನ ಕೇಂದ್ರವಾದ ರಾಜಸ್ಥಾನ ರಾಜ್ಯದ ಅರಾವಳಿ ಪರ್ವತದಲ್ಲಿನ ಮೌಂಟ್ ಅಬುಗೆ ಭಾನುವಾರ ಬೀದರ್ ಪತ್ರಕರ್ತರ ನಿಯೋಗ ತೆರಳಿತು.

ಸೋಮವಾರದಿಂದ ಗುರುವಾರದ ವರೆಗೆ ಜರುಗಲಿರುವ ರಾಷ್ಟ್ರೀಯ ಮಾಧ್ಯಮ ಸಮ್ಮೇಳನದಲ್ಲಿ ಭಾಗವಹಿಸಲು 7 ಜನರ ತಂಡ ಅಲ್ಲಿಯ ಶಾಂತಿವನದ ಆನಂದ ಕಣ್ತುಂಬಿಕೊಂಡಿತು. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಸ್ಥಾಪನೆಗೆ ಕಾರಣೀಕರ್ತರಾಗಿದ್ದ ಬಿ.ಕೆ ಪ್ರಕಾಶಮಣಿ ದಾದಿ, ಬಿ ಕೆ ಜಾನಕಿ ದಾದಿ ಹಾಗೂ ಬಿ ಕೆ ಗುಲ್ಜಾರ್ ದಾದಿ ಅವರ ಸ್ಮಾರಕದ ಪರಿಸರದಲ್ಲಿ ಯೋಗ ಜರುಗಿತು.

ಈ ಸಂದರ್ಭದಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯ ದೀಪಕ ಮನ್ನಳ್ಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಜಿಲ್ಲಾ ಕಾರ್ಯಕಾರಿ ಸದಸ್ಯ ಗೋಪಿಚಂದ ತಾಂದಳೆ, ಸಂಜೆವಾಣಿ ಪತ್ರಿಕೆಯ ತನುಜಾ ಸುಭಾಷ, ಕು.ಗಿರಿಜಾ ಕನಮಡಿ, ಓಂ ಸಾಯಿ ಹಾಗೂ ಪೂಜಾ ಉಪಸ್ಥಿತರಿದ್ದರು.