ರಾಷ್ಟ್ರೀಯ ಮತದಾರರ ದಿನಾಚರಣೆ: ಸ್ಪರ್ಧಾತ್ಮಕ ಚಟುವಟಿಕೆ


ಚಿತ್ರದುರ್ಗ,ನ.೧೭; ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಮದಕರಿನಾಯಕ ಪ್ರೌಢಶಾಲೆಯಲ್ಲಿ ಈಚೆಗೆ ಚಿತ್ರದುರ್ಗ ತಾಲ್ಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆ ನಡೆಯಿತು.ಕರ್ನಾಟಕ ಚುನಾವಣಾ ಆಯೋಗ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ನಿರ್ದೇಶನದಂತೆ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಬಗ್ಗೆ ಅರಿವು ಮೂಡಿಸಲು ಮಹತ್ವಕಾಂಕ್ಷಿ ಯೋಜನೆಯಾದ “ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಪಾಲ್ಗೊಳ್ಳುವಿಕೆ” (ಸ್ವೀಪ್) ನ ಅಡಿಯಲ್ಲಿ ತಾಲ್ಲೂಕು  ಶಾಲಾ ಹಂತದಲ್ಲಿ ಪ್ರಬಂಧ, ರಸಪ್ರಶ್ನೆ, ಪೋಸ್ಟರ್ ಮೇಕಿಂಗ್ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಚಿತ್ರದುರ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಬಸವರಾಜಯ್ಯ ಕಾರ್ಯಕ್ರಮ ಉದ್ಘಾಟಿಸಿ, ಪ್ರಜಾಪ್ರಭುತ್ವದಲ್ಲಿ ಮತದಾರನೆ ಪ್ರಭು ಎಂದು ಹೇಳಿದರು.
 ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಆರ್‍ಸಿ ಈಶ್ವರಪ್ಪ, ನೊಡಲ್ ಅಧಿಕಾರಿ ಇಸಿಓ ಇನಾಯತ್, ಎಂ.ಆರ್.ನಾಗರಾಜ್, ಎಂ.ಎನ್ ವೇಣುಗೋಪಾಲ್, ಉರ್ದು ಇ.ಸಿ.ಓ ಸಮೀರಾ ಮತ್ತು ಇತರರು ಉಪಸ್ಥಿತರಿದ್ದರುAttachments area