ರಾಷ್ಟ್ರೀಯ ಮಟ್ಟದ ಶಿಬಿರಕ್ಕೆ ಎನ್‌ಎಂ ಸಿ ವಿದ್ಯಾರ್ಥಿನಿ ಕೆಡೆಟ್ ವಿಸ್ಮಿತ ಕೆ.ಪಿ. ಆಯ್ಕೆ

ಸುಳ್ಯ, ಜೂ.೭- ಉತ್ತರಕಾಶಿ ,ಉತ್ತರಖಾಂಡ್ ನಲ್ಲಿ ಎನ್ ಸಿ ಸಿ ವತಿಯಿಂದ ನಡೆಯುವ ರಾಷ್ಟ್ರೀಯ ಮಟ್ಟದ ಶಿಬಿರಕ್ಕೆ ೧೯ ಕೆಎಸ್‌ಆರ್ ಬೆಟಾಲಿಯನ್ , ಎನ್ ಸಿ ಸಿ ಮಡಿಕೇರಿಯಿಂದ ಸುಳ್ಯದ ಎನ್ ಎಂ ಸಿಯ ಪ್ರಥಮ ಬಿ ಕಾಂ ವಿದ್ಯಾರ್ಥಿನಿ ಕೆಡೆಟ್ ವಿಸ್ಮಿತ ಕೆ ಪಿ ಯವರು ಆಯ್ಕೆಯಾಗಿದ್ದಾರೆ.
೨೦೨೧ ಜೂನ್ ೬ ರಿಂದ ಜೂನ್ ೧೯ ರವರೆಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅಡ್ವೆಂಚರಸ್ ಕೋರ್ಸ್ ಕ್ಯಾಂಪ್ ಇದಾಗಿದೆ. ಇವರಿಗೆ ಎನ್ ಎಂ ಸಿ ಕಾಲೇಜಿನ ಎನ್ ಸಿ ಸಿ ಘಟಕದ ಎ ಎನ್ ಒ ಲೆಫ್ಟಿನೆಂಟ್ ಸೀತರಾಮ ಎಂ ಡಿ ಯವರು ಮಾರ್ಗದರ್ಶನ ನೀಡಿರುತ್ತಾರೆ.ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಎಲಿಮಲೆ ಜ್ಞಾನ ದೀಪ ವಿದ್ಯಾಸಂಸ್ಥೆ ಯಲ್ಲಿ ವ್ಯಾಸಾಂಗ ಮಾಡಿದ್ದು ,ಪದವಿ ಪೂರ್ವ ಶಿಕ್ಷಣ ವನ್ನು ಎನ್ ಎಂ ಸಿ ಕಾಲೇಜಿನಲ್ಲಿ ಮಾಡಿರುತ್ತಾರೆ. ಪ್ರಸ್ತುತ ಈಗ ಎನ್ ಎಂ ಸಿ ಪದವಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು ಕಲಿಕೆಯೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕ್ಕೊಂಡು ಜಿಲ್ಲೆ ,ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿರುತ್ತಾರೆ.ಕಬಡ್ಡಿಯಲ್ಲಿ ರಾಜ್ಯ ಮಟ್ಟದ ತಂಡವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಯಾದ ಕೀರ್ತಿ ಇವರಿಗಿದೆ. ಇವರು ಮಕಂಜ ಗ್ರಾಮದ ಕೊಂಪುಳಿ ಪುಂಡರೀಕ ಗೌಡ ಹಾಗೂ ಜ್ಯೋತಿ ಪ್ರಭಾ ದಂಪತಿಗಳ ಪುತ್ರಿ.