ರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆ ಸನ್ಮಾನ

ಕಾಳಗಿ : ನ.5:ತಾಲೂಕು ಪಂಚಾಯತ ಯೋಜನಾಧಿಕಾರಿ ವಿಶ್ವನಾಥ ಕರ್ನಾಟಕ ರಾಜ್ಯ ನೌಕರರ ಸಂಘ 2023 -24 ರ ಕ್ರೀಡಾಕೂಟ 75ಕೆಜಿ ಕುಸ್ತಿ ವಿಭಾಗ ದಲ್ಲಿ ರಾಜ್ಯ ಮಟ್ಟದ ಪ್ರಥಮ ಬಹುಮಾನ ಗೆದ್ದು ರಾಷ್ಟ್ರೀಯ ಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿ ಕಾಳಗಿ ತಾಲೂಕಿಗೆ ಹಾಗೂ ತಾಲೂಕು ಪಂಚಾಯತ ಇಲಾಖೆಗೆ ಕೀರ್ತಿ ತಂದ ಪ್ರಯುಕ್ತ ಸಿಹಿ ಹಂಚಿಸಿ ಸನ್ಮಾನಿಸಿ ದಲಿತ ಸೇನೆ ತಾಲೂಕು ಸಮಿತಿ ಕಾಳಗಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ, ದಲಿತ ಸೇನೆ ಕಾರ್ಯಧ್ಯಕ್ಷ ನಾಗರಾಜ ಬೇವಿನಕರ್ , ಜೈಭೀಮ್ ಅರೆಜಂಬಗ , ಮನೋಜ್ ಕಲಗುರ್ತಿ , ರೇವಣಸಿದ್ಧ ಸೇರಿ ಹಾಗೂ ತಾಲೂಕು ಪಂಚಾಯತ ಸಿಬ್ಬಂದಿ ವರ್ಗದವರು ಇದ್ದರು.