ರಾಷ್ಟ್ರೀಯ ಮಟ್ಟದಲ್ಲಿ ೮ ನೇ ರ್‍ಯಾಂಕ್ ಪಡೆದ ಮಹ್ಮದ್ ಅಫಾನ್ ದುಂಬಾ

೧೦ ನೇ ತರಗತಿ ಸಿಬಿಎಸ್‌ಇ ಫಲಿತಾಂಶ : ನವೋದಯ ಸೆಂಟ್ರಲ್ ಸ್ಕೂಲ್ ಸಾಧನೆ
ರಾಯಚೂರು.ಜು.೨೩- ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ೨೦೨೧-೨೨ ನೇ ಸಾಲಿನ ೧೦ ನೇ ತರಗತಿ ಫಲಿತಾಂಶದಲ್ಲಿ ನಗರದ ನವೋದಯ ಸೆಂಟ್ರಲ್ ಸ್ಕೂಲ್ ರಾಷ್ಟ್ರೀಯ ಮಟ್ಟ (ನ್ಯಾಷನಲ್) ದಲ್ಲಿ ೮ ನೇ ರ್‍ಯಾಂಕ್ ಮತ್ತು ಜಿಲ್ಲೆಯ ಫಸ್ಟ್ ಱ್ಯಾಂಕ್ ಸಾಧಿಸುವ ಮೂಲಕ ಅತ್ಯುತ್ತಮ ಫಲಿತಾಂಶ ಸಾಧಿಸಿದೆ.
ಪರೀಕ್ಷೆಗೆ ಹಾಜರಾದ ೪೮ ವಿದ್ಯಾರ್ಥಿಗಳಲ್ಲಿ ೩೭ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ೧೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆ ಶೇ.೧೦೦ ರಷ್ಟು ಫಲಿತಾಂಶ ಸಾಧಿಸಿ ಜಿಲ್ಲೆಗೆ ಕೀರ್ತಿ ತಂದಿದೆ.
ಶಾಲೆಯ ವಿದ್ಯಾರ್ಥಿ ಮಹ್ಮದ್ ಅಫಾನ್ ದುಂಬಾ ಶೇ.೯೮.೬ (೪೯೩/೫೦೦) ಅಂಕಗಳಿಸುವ ಮೂಲಕ ರಾಷ್ಟ್ರೀಯ ಮಟ್ಟದ ಫಲಿತಾಂಶದಲ್ಲಿ ೮ ನೇ ರ್‍ಯಾಂಕ್ ಸಾಧಿಸುವುರೊಂದಿಗೆ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯಾಗಿದ್ದಾನೆ. ಶ್ರೇಯಾಂಶ ಬೋಹರಾ ಶೇ.೯೬.೨ (೪೮೧/೫೦೦), ಯುಸ್ರಾನಾಬಾ ಶೇ.೯೬ (೪೮೦/೫೦೦) ರಷ್ಟು ಅಂಕ ಪಡೆಯುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ. ಉತ್ತಮ ಫಲಿತಾಂಶದ ಮೂಲಕ ಶ್ರೇಷ್ಟ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್. ರೆಡ್ಡಿ ಅವರು ಅಭಿನಂದಿಸಿ, ಸೂಕ್ತ ಮಾರ್ಗದರ್ಶನ ನೀಡಿದ ಸಂಸ್ಥೆಯ ನಿರ್ದೇಶಕರಾದ ನಂದಿಕಾ ರೆಡ್ಡಿ, ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.