ರಾಷ್ಟ್ರೀಯ ಭೋವಿ ಜನೋತ್ಸವದಲ್ಲಿ  ಶ್ರೀಗಳಿಗೆ ಡಿ ಬಸವರಾಜ್ ರಿಂದ ಸನ್ಮಾನ

ಸಂಜೆವಾಣಿ ವಾರ್ತೆ

ದಾವಣಗೆರೆ. ಜು.೧೯; ಚಿತ್ರದುರ್ಗದಲ್ಲಿ ಭೋವಿ ಗುರುಪೀಠದ ಆಶ್ರಯದಲ್ಲಿ ರಾಷ್ಟಿçÃಯ ಭೋವಿ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಭೋವಿ ಗುರುಪೀಠದ ಶ್ರೀಗಳಾದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯ 25ನೇ ಲಾಂಛನ ದೀಕ್ಷಾ ಮಹೋತ್ಸವ, 14ನೇ ಪಟ್ಟಾಭಿಷೇಕ ಮಹೋತ್ಸವ, ಶ್ರೀಗಳ 38ನೇ ವಸಂತೋತ್ಸವ, ಭೋವಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಭೋವಿ ಸಮಾಜದ ವಧು-ವರರ ಸಮಾಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಶ್ರೀಮಠದಿಂದ ಹಮ್ಮಿಕೊಳ್ಳ ಲಾಗಿತ್ತು. ಈ ಸಂದರ್ಭದಲ್ಲಿ ಭೋವಿ ಶ್ರೀಗಳಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳಿಗೆ ಭೋವಿ ಸಮಾಜದ ಮುಖಂಡರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರರಾದ ಡಿ ಬಸವರಾಜ್ ರವರು ಶಾಲುವದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ಟಿ ವೈ ಕುಮಾರ್, ಬಿ ಎನ್ ವಿನಾಯಕ, ಹೆಚ್. ಜಯಣ್ಣ, ಶಿಲ್ಪಿ ಶ್ರೀನಿವಾಸ್, ವಿ.ಗೋಪಾಲ್, ಎಬಿ ನಾಗರಾಜ್ ಸೇರಿದಂತೆ ಇತರರು ಹಾಜರಿದ್ದರು