ರಾಷ್ಟ್ರೀಯ ಭಾವೈಕ್ಯ ಬಿಂಬಿಸುವ ಗೋಳಸಾರ ಪುಂಡಲಿಂಗೇಶ್ವರ ಮಠ

ಇಂಡಿ:ಜ.30:ಮೌನಕ್ರಾಂತಿಯ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಏಕೈಕ ಮಠ ಗೊಳಸಾರದ ಪುಂಡಲಿಂಗ ಮಹಾಶಿವಯೋಗಿಗಳ ಮಠ.ತಾಯಿಯ ಮುಖದಲ್ಲಿ ಕಾಣುವ ಕರುಣೆಯ ಭಾವನೆ ಇಂದಿನ ಮಠದ ಪೀಠಾಪತಿ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಮುಖದಲ್ಲಿ ಕಾಣುತ್ತದೆ.ಇದು ನಡೆದ ಧರ್ಮಸಭೆಯು ರಾಷ್ಟ್ರೀಯ ಭಾವೈಕ್ಯತೆ ಬಿಂಬಿಸುವ ಕಾರ್ಯವಾಗಿದೆ.ಹಿಂಥ ಕಾರ್ಯ ಕಂಡಿದ್ದು ಗೋಳಸಾರ ಮಠದಲ್ಲಿ ಎಂದು ಸೋಲಾಪೂರ ಎಂಪಿ ಡಾ.ಜಯಸಿದ್ದೇಶ್ವರ ಮಹಾಸ್ವಾಮೀಜಿ ಗೌಡಗಾಂವ ಹೇಳಿದರು.
ಅವರು ಸೋಮವಾರ ಇಂಡಿ ತಾಲೂಕಿನ ಗೊಳಸಾರ ಗ್ರಾಮದಲ್ಲಿ ಶ್ರೀ ತ್ರೀಧರೇಶ್ವರ ಮಹಾಶಿವಯೋಗಿಗಳ 30 ನೇ ಪುಣ್ಯಾರಾಧನೆ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಧರ್ಮಚಿಂತನಾ ಸಭೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿ,ಮಾತನಾಡಿದರು.
ಜಗವೆಲ್ಲ ನಗುತ್ತಿರಲಿ ಜಗದ ದುಖ ನನಗಿರಲಿ ಎಂದು ಹೇಳಿದ ತ್ರೀಧರೇಶ್ವರ ಮಹಾಶಿವಯೋಗಿಗಳು,ನನಗೆ ಕಷ್ಟವನ್ನು ನೀಡುವುದಾದರೆ ಶಕ್ತಿಮಿರಿ ಕಷ್ಟ ನೀಡು,ಆದರೆ ನನ್ನ ಬಳಿ ಬರುವ ಭಕ್ತಸಮೂಹಕ್ಕೆ ಸಿರಿಸಂಪತ್ತು ನೀಡು ಎಂದು ಭಗವಂತನಲ್ಲಿ ಪ್ರಾರ್ಥಿಸಿದ ಏಕೈಕ ಶರಣ ತ್ರೀಧರೇಶ್ವರ ಶ್ರೀ ಎಂದು ಹೇಳಿದರು.ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಸಾಮೂಹಿಕ ವಿವಾಹದಂತ ಸಮಾಜಮುಖಿ ಕಾರ್ಯದಲ್ಲಿ ತೊಡಿಗಿರುವ ಇಂದಿನ ಪೀಠಾಪತಿ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಕಾರ್ಯ ಶ್ಲಾಘನೀಯವಾದುದ್ದು ಎಂದು ಹೇಳಿದ ಶ್ರೀಗಳು,ಬಡತನದಲ್ಲಿ ಇರುವ ಕುಟುಂಬಗಳಿಗೆ ಆರ್ಥಿಕ ಹೊರೆಯನ್ನು ತಗ್ಗಿಸಲು ಪ್ರತಿವರ್ಷ ಸಾಮೂಹಿಕ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಐತಿಹಾಸಿಕ ದಾಖಲೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ,ದಯಾಸಾಗರ ಪಾಟೀಲ ಮಾತನಾಡಿ, 12 ನೇ ಶತಮಾನದಲ್ಲಿ ಮಾತನಾಡಿದನ್ನು ಬದುಕಿನಲ್ಲಿ ಆಚರಣೆಯಲ್ಲಿ ತಂದವರು ಮೊಟ್ಟಮೊದಲು ಬಸವಣ್ಣವನರು,ಅವರ ನಂತರದಲ್ಲಿ ಆಡಿದ ಮಾತು ಬದುಕಿನಲ್ಲಿ ಆಚರಣೆಯಲ್ಲಿ ತಂದವರು ಪುಂಡಲಿಂಗ ಮಹಾಶಿವಯೋಗಿ ಹಾಗೂ ತ್ರೀಧರೇಶ್ವರ ಮಹಾಶಿವಯೋಗಿಗಳು ಎಂದು ಹೇಳಿದರು.ಅಭಿನವ ಪುಂಡಲಿಂಗ ಮಹಾಶಿವಯೋಗಿ,ವೃಷಭಲಿಂಗ ಮಹಾಶಿವಯೋಗಿ,ಅಭಿನವ ಶಿವಲಿಂಗ ಮಹಾಸ್ವಾಮೀಜಿ,ಶಂಕರಾನಂದ ಮಹಾಸ್ವಾಮೀಜಿ, ಸೋಮಲಿಂಗ ಮಹಾರಾಜ,ಚಿನ್ಮಯಾನಂದ ಮಹಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಮನೋಹರ ಮಂದೋಲಿ,ಪರಮಾನಂದ ಅಲಗೊಂಡ, ರಾಜೇಶ್ರಿ ಯರನಾಳ, ಶಿವಾನಂದ ಮಾನಕರ,ಸುರೇಶ ಗೆಜ್ಜಿ ವೇದಿಕೆ ಮೇಲೆ ಇದ್ದರು.ಎಂ.ಆರ್.ಪಾಟೀಲ, ಎಸ್.ಆರ್.ಮೇತ್ರಿ,ಹಣಮಂತ ಮಾಲಗಾರ, ದತ್ತಾಯತ್ರೇಯ ಮಠಪತಿ,ಸಿದ್ದಾರಾಮ ತೆಗ್ಗೆಳ್ಳಿ,ಎ.ಪಿ.ಕಾಗವಾಡಕರ, ಆಲಿಂಗರಾಯ ಕುಮಸಗಿ, ರವೀಂದ್ರ ಆಳೂರ,ಶಿವಲಿಂಗಪ್ಪ ನಾಗಠಾಣ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.
35 ಜೋಡಿ ಇದೆ ಸಂದರ್ಭದಲ್ಲಿ ನವಜೀವನಕ್ಕೆ ಕಾಲಿಟ್ಟರು.ಎ.ಪಿ.ಕಾಗವಾಡಕರ ಸ್ವಾಗತಿಸಿದರು. ರವೀಂದ್ರ ಆಳೂರ ನಿರೂಪಿಸಿದರು.ಎ.ಎಸ್.ಪಾಸೋಡಿ ವಂದಿಸಿದರು.
ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ತ್ರಿಮೂರ್ತಿ ಕಾರಣ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.