ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ

ಕಲಬುರಗಿ:ನ.22:ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ರಾಸೇಯೋ ಕೋಶದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋ ಸಮಾರಂಭವು ಜರುಗಿತು. ಶಿಬಿರದ ಮುಖ್ಯ ಅತಿಥಿಯಾಗಿ ಆಗಮಿಸಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಬಿ. ಶರಣಪ್ಪ, ಕೆ.ಎ.ಎಸ್, ಇವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪುರಕವಾಗಿರುವುದು. ಈ ನಿಟ್ಟಿನಲ್ಲಿ ಸ್ವಯಂ ಸೇವಕರು ಇದರಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗವನ್ನು ಪಡೆಸಿಕೊಳ್ಳಬೇಕೆಂದರು.

ಕ್ರಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಪ್ರೊ. ವಿಜಯಕುಮಾರ ವಿ. ರಾಸೇಯೋ ಕಾರ್ಯಕ್ರಮ ಅಧಿಕಾರಿ, ಕಣ್ಣೂರು ವಿಶ್ವವಿದ್ಯಾಲಯ, ಕಣ್ಣೂರು, ಕೇರಳ ಇವರು ಸ್ವಾಗತಿಸಿದರು. ಪ್ರೊ. ರವಿ ಪ್ರಭಾ, ರಾಸೇಯೋ ಕಾರ್ಯಕ್ರಮ ಅಧಿಕಾರಿಗಳು, ಮಂಗಳೂರು ವಿಶ್ವವಿದ್ಯಾಲಯ ಇವರು ಶಿಬಿರದಲ್ಲಿ ನಡೆದ ಎಳು ದಿನಗಳ ಕಾರ್ಯಚಟುವಟಿಕೆಗಳ ವರದಿಯನ್ನು ಓದಿದರು. ಸ್ವಯಂಸೇವಕಿಯಾದ ಕು.ವೇದಾ ಮತ್ತು ಸ್ವಯಂಸೇವಕನಾದ ಯಶ್ ಇವರು ಶಿಬಿರದಲ್ಲಿ ಕಳೆದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅದೇರೀತಿ ಡಾ. ಅತುಲ್, ರಾಸೇಯೋ ಕಾರ್ಯಕ್ರಮ ಅಧಿಕಾರಿಗಳು, ಸೋಲಪುರ ವಿಶ್ವವಿದ್ಯಾಲಯ, ಸೋಲಾಪುರ ಮತ್ತು ಡಾ. ಅಡೆಪ್ಪಾ, ವೆಟರನರಿ ವಿಶ್ವವಿದ್ಯಾಲಯ, ಬೀದರ ಇವರು ತಮ್ಮ ಅನುಭವವನ್ನು ಹಂಚಿಕೊಂಡರು. ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಆಯೋಜಿಸಿರುವ ಗುಲಬರ್ಗಾ ವಿಶ್ವವಿದ್ಯಾಲಯದ ರಾಸೇಯೋ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಎನ್.ಜಿ. ಕಣ್ಣೂರು ಇವರು ವಂದನಾರ್ಪನಣೆಯನ್ನು ಮಾಡಿದರು. ಹಾಗೂ ಭಾಗವಹಿಸಿದ ಎಲ್ಲಾ ಶಿಬಿರಾರ್ತಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದಿರು. ಕೊನೆಯದಾಗಿ ಕಾರ್ಯಕ್ರಮವನ್ನು ಕು. ಅನಾಮಿಕ ಮತ್ತು ಕು. ವಿದ್ಯಾಶ್ರೀ ಇವರು ನಿರೂಪಿಸಿದರು.

ಕೊನೆಯದಾಗಿ ರಾಷ್ಟ್ರ ಗೀತೆಯೊಂದಿಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಮುಕ್ತಾಯಗೊಂಡಿತು.