ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಉಚಿತ ಶಸ್ತ್ರಚಿಕಿತ್ಸೆ ಪಡೆದುಕೊಂಡ ಫಲಾನುಭವಿಗಳ ಮೆಚ್ಚುಗೆ

ಕಲಬುರಗಿ,ಮೇ.22-ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಉಚಿತ ಶಸ್ತ್ರಚಿಕಿತ್ಸೆ ಪಡೆದುಕೊಂಡ ಫಲಾನುಭವಿಗಳು ಅರ್‍ಬಿಎಸ್‍ಕೆ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಹೊಸ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆರ್‍ಸಿ ಹೆಚ್ ವಿಭಾಗ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಆರೋಗ್ಯ ಸಮಗ್ರ ಪರಿಶೀಲನ ಸಮನ್ವಯ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಆರ್‍ಬಿಎಸ್‍ಕೆ ಸಮಗ್ರ ಪರಿಶೀಲನ ಸಭೆಯಲ್ಲಿ ಸೀಳು ತುಟಿ, ಅಂಗುಳನ ಶಸ್ತ್ರಚಿಕಿತ್ಸೆ ಮತ್ತು ಕಣ್ಣಿನ ಪೆÇೀರೆಗಳು, ನರರೋಗಕ್ಕೆ ಒಳಾಗದ, ಸಂಬಂಧಿಸಿದ ಮಕ್ಕಳು ಮತ್ತು ಪೆÇೀಷಕರಿಗೆ ಮೊದಲು ತಂದೆ ತಾಯಿಗೆ, ಸಕಾಲಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವದರ ಮೂಲಕ ಮಕ್ಕಳಿಗೆ ಬದುಕಲು ಕಟ್ಟಿಕೊಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು. ಆರ್‍ಬಿಎಸ್ ಕೆ. ಸಿಬ್ಬಂದಿಗಳು, ವೈದ್ಯರು ಪ್ರಮುಖ ಪಾತ್ರವಹಿಸಿದಕ್ಕೆ, ಪ್ರತಿ ಗ್ರಾಮ, ನಗರ ಮತ್ತು ತಾಲ್ಲೂಕಿನಲ್ಲಿ ನಮ್ಮ ಆರೋಗ್ಯ ಸಿಬ್ಬಂದಿಯವರು ಉತ್ತಮ ಕೆಲಸ ನಿರ್ವಹಿಸುವ ಮೂಲಕ ಪ್ರತಿ ಪಿಹೆಚ್‍ಸಿ, ಸಿಹೆಚ್‍ಸಿ. ಮಕ್ಕಳಿಗೆ ಹಾಗೂ ಪೆÇೀಷಕರಿಗೆ ಹೃದಯ ಸಂಬಂಧಿ, ಸೀಳು ತುಟಿ, ನರ ರೋಗಗಳ ಬಗ್ಗೆ ಅರಿವು/ ಜಾಗೃತಿ ಮೂಡಿಸುವುದರ ಜೊತೆಗೆ ಅನುಸರಣೆ ಮಾಡಿ ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ಸರ್ಕಾರದ ಸೇವೆ ಸೌಲಭ್ಯ ದೊರಕಿಸಿಕೊಟ್ಟು ತಂದೆ – ತಾಯಿ ಮತ್ತು ಮಕ್ಕಳಿಗೆ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕೆ ಸಂತೋಷವಾಗುತ್ತದೆ ಎಂದು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭನ್ವರ ಸಿಂಗ್ ಮೀನಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ರತಿಕಾಂತ ವಿ ಸ್ವಾಮಿ ಮಾತನಾಡಿದರು. ಜಿಲ್ಲಾ ಆರ್‍ಸಿಹೆಚ್ ಅಧಿಕಾರಿಗಳು ಮತ್ತು ಜಿಲ್ಲಾ ನೂಡಲ್ ಅಧಿಕಾರಿಗಳು ಡಾ.ಶರಣಬಸಪ್ಪ ಕ್ಯಾತನಾಳ ಅವರು ಮಾತನಾಡುತ್ತ, ರಾಷ್ಟ್ರೀಯ ಬಾಲ ಸ್ವಾಸ್ಥ ಕಾರ್ಯಕ್ರಮದ ಅಡಿಯಲ್ಲಿ ಪ್ರಯೋಜನಗಳು ಪಡೆದ ಹೃದಯಕೆ ಸಂಬಂಧಿಸಿದ, ಸೀಳು ತುಟಿ, ನರರೋಗಕ್ಕೆ ಸಂಬಂಧಿಸಿದ, ಮಕ್ಕಳು ಮತ್ತು ಪೆÇೀಷಕರಿಗೆ, ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ತಮ್ಮ ತಮ್ಮ ಜವಾಬ್ದಾರಿ ವಹಿಸಿಕೊಂಡ ನಮ್ಮೆಲ್ಲ ಸಿಬ್ಬಂದಿ ವರ್ಗದವರು ಒಳ್ಳೆಯ ಕೆಲಸ ನಿರ್ವಹಿಸುವ ಮೂಲಕ ಮಕ್ಕಳಿಗೆ ಬಲ ತುಂಬುವಂತ ಕೆಲಸ ಮಾಡುವುದರ ಮೂಲಕ ಮಕ್ಕಳಲ್ಲಿ ಹಾಗೂ ಪೆÇೀಷಕರಲ್ಲಿ ಮಂದಹಾಸ ಮೂಡಿದೆ. ಒಟ್ಟು 60 ಫಲಾನುಭವಿಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂದು ಹೇಳಿದರು.
ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಮಾರುತಿ ಕಾಂಬಳೆ, ಅರ್‍ಬಿಎಸ್‍ಕೆ ಸಂಯೋಜಕ ಡಾ.ಪ್ರವೀಣ್ ಜೋಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮುರುಗೇಶ ಗುಣಾರಿ, ಶಿಕ್ಷಣ ಇಲಾಖೆ ಅಧಿಕಾರಿ ಗೋಪಾಲ ಚಾವ್ಹಣ್, ಆರ್‍ಸಿಹೆಚ್ ವಿಭಾಗದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿರೇಶ್ ಜವಳಗೇರಿ, ಡಿಪಿಸಿ ರವೀಂದ್ರ ಠಾಕೂರ್, ಡಿಇಓ ರಾಜೇಶ್ವರಿ. ಜಿಮ್ಸ್ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು, ಎಲ್ಲಾ ತಾಲೂಕಿನ ಆರ್ ಬಿ ಎಸ್ ಕೆ ತಂಡದವರು, ಡಾ. ಮತೀನ ಆಲಿ. ಜಿಲ್ಲಾ ಡಿ ಇ ಐ ಸಿ ವ್ಯವಸ್ಥಾಪಕ ಕೃಷ್ಣ ವಗ್ಗೆ. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಫಲಾನುಭವಿ ಮಕ್ಕಳು ಹಿರಿಯ ನಾಗರಿಕರು, ಪೆÇೀಷಕರು ಉಪಸ್ಥಿತರಿದ್ದರು.