ರಾಷ್ಟ್ರೀಯ ಬಸವ ಸೈನ್ಯದಿಂದ ಅಕ್ಕಮಹಾದೇವಿ ಜಯಂತೋತ್ಸವ ಆಚರಣೆ

ಬಸವನಬಾಗೇವಾಡಿ:ಎ.7: ಕನ್ನಡದ ಮೊದಲ ಕವಿಯತ್ರಿ 12ನೇ ಶತಮಾನದಲ್ಲಿ ಮಹಿಳಾ ಸಮಾನತೆಯನ್ನು ಜಗತ್ತಿಗೆ ಸಾರಿದ ಮಹಾನ್ ಶರಣೆ ಅಕ್ಕಮಹಾದೇವಿ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಅವರು ಹೇಳಿದರು
ಪಟ್ಟಣದ ವೀರ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಹಮ್ಮಿಕೊಂಡಂತ ಅಕ್ಕಮಹಾದೇವಿ ಜಯಂತೋತ್ಸವದ ಪ್ರಯುಕ್ತ ಮಾತನಾಡಿದ ಅವರು ಮಹಿಳೆಯರು ಕೇವಲ ಕುಟುಂಬಕ್ಕೆ ಸೀಮಿತವಾಗಿಲ್ಲ ತೊಟ್ಟಿಲ ತೂಗುವ ಕೈಗಳಿಗೆ ಅವಕಾಶ ನೀಡಿದರೆ ಸಮಾಜವನ್ನು ಮುನ್ನಡೆಸುವ ಶಕ್ತಿ ಇದೆ ಎಂದು ತೋರಿಸಿಕೊಟ್ಟವರು ಅಕ್ಕಮಹಾದೇವಿಯವರು ಅಕ್ಕಮಹಾದೇವಿಯವರು ತಮ್ಮ ವೈರಾಗ್ಯ ಜೀವನ ನಡೆಸಿ ಇಂದು ಎಲ್ಲರಿಗೂ ಅಕ್ಕನಾಗಿ ಅಮರರಾಗಿದ್ದಾರೆ ಅವರು ಹುಟ್ಟಿ ಬೆಳೆದು ನಡೆದಾಡಿದ ನಾಡಿನಲ್ಲಿ ನಾವು ಇದ್ದೇವೆ ಎಂದರೆ ಅದು ನಮ್ಮ ಪುಣ್ಯವಾಗಿದೆ ಇಂದಿನ ಯುವತಿಯರು ಅಕ್ಕನ ವಚನಗಳನ್ನು ಓದುವುದರ ಮೂಲಕ ಅವರಂತೆ ಧೈರ್ಯದಿಂದ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ತಾಲೂಕ ಘಟಕದ ಅಧ್ಯಕ್ಷರಾದ ಸಂಜು ಬಿರಾದಾರ ಮುಖಂಡರಾದ ಶ್ರೀಕಾಂತ್ ಕೊಟ್ರಶೆಟ್ಟಿ ಸುನಿಲ್ ಚಿಕ್ಕೊಂಡ ಮನ್ನನ್ ಶಾಬಾದಿ ಶಂಕರಗುರು ರಜಪೂತ್ ರಾಮನಗೌಡ ಚಿಕ್ಕೋಂಡ ಜಟ್ಟಿಂಗರಾಯ ಮಾಲಗಾರ ಮಲ್ಲು ಬನಾಸಿ ಶ್ರೀಧರ್ ಕುಂಬಾರ್ ಮಂಜುನಾಥ್ ಜಾಲಗೇರಿ ಮಂಜುನಾಥ್, ಚಿಕ್ಕೋಂಡ ಮುತ್ತು ಮಿಣಜಿಗಿ ಅರುಣ ಗೊಳಸಂಗಿ ಜಗದೀಶ್ ಹೊನ್ನುಟಗಿ ನವೀನ್ ಮಾಂತೇಶ್ ಹೆಬ್ಬಾಳ ಮಹೇಶ್ ಪತ್ತಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು