ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ

ಬೀದರ:ಅ.2:ಇಂದಿನ ಯುವ ಪೀಳಿಗೆಯು ಅಶಿಸ್ತಿನ ಜೀವನ ಶೈಲಿಯಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಅವರು ತಮ್ಮ ಮುಂದಿನ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದು, ಇದನ್ನು ಅವರು ಆರೋಗ್ಯಯುಕ್ತ ಜೀವನ ಶೈಲಿಯನ್ನು ಮೈಗೂಡಿಸಿಕೊಂಡು ಮತ್ತು ಪೌಷ್ಟಿಕಯುಕ್ತ ಆಹಾರವನ್ನು ತೆಗೆದುಕೊಳ್ಳುವುದರ ಮೂಲಕ ತಮ್ಮ ಆರೋಗ್ಯದ ಮಟ್ಟವನ್ನು ಸುಧಾರಿಸಿಕೊಳ್ಳಬಹುದೆಂದು ಬೀದರ ವಿಶ್ವವಿದ್ಯಾಲಯ ಗೃಹ ವಿಜ್ಞಾನ, ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಕೆ.ಭವಾನಿ ಹೇಳಿದರು.

ಅವರು ಶುಕ್ರವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಬೀದರ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಬೀದರ ಇವರುಗಳ ಸಹಯೋಗದೊಂದಿಗೆ ತೋಟಗಾರಿಕೆ ಮಹಾವಿದ್ಯಾಲಯ ಬೀದರನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ-2023 ಎಲ್ಲರಿಗೂ ಕೈಗೆಟುಕುವ ಆರೋಗ್ಯಕರ ಆಹಾರ ಕ್ರಮ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ್. ವಿ. ಪಾಟೀಲ ಮಾತನಾಡಿ, 1982 ರಲ್ಲಿ ಕೇಂದ್ರ ಭಾರತ ಸರ್ಕಾರವು ರಾಷ್ಟ್ರೀಯ ಪೌಷ್ಟಿಕಾಂಶ ವಾರದ ಆಚರಣೆಯನ್ನು ಪ್ರಾರಂಭಿಸಿತು. ಪೌಷ್ಠಿಕಾಂಶದ ಮಹತ್ವದ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ಮತ್ತು ಆರೋಗ್ಯಕರ ಮತ್ತು ಸುಸ್ಥಿರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಅವರನ್ನು ಉತ್ತೇಜಿಸಲು ಅಭಿಯಾನವನ್ನು ಪ್ರಾರಂಭಿಸಲಾಗಿರುತ್ತದೆ. ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವು ಭಾರತದಲ್ಲಿ ವಾರ್ಷಿಕ ಆಚರಣೆಯಾಗಿದ್ದು ಅದು ಸೆಪ್ಟೆಂಬರ್ 1 ರಿಂದ 7 ರವರೆಗೆ ನಡೆಯುತ್ತದೆ. ಈ ವಾರದಲ್ಲಿ, ಸರಿಯಾದ ಪೋಷಣೆಯ ಮಹತ್ವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸುವಲ್ಲಿ ಅದರ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರವು ಒಟ್ಟಾಗಿ ಸೇರುತ್ತದೆ. ಈ ಘಟನೆಯು ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಅವರ ಆಹಾರ ಪದ್ಧತಿ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಲು ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಪೌಷ್ಠಿಕಾಂಶವು ಆಹಾರ ಸೇವನೆ ಮತ್ತು ಬಳಕೆಯ ವಿಜ್ಞಾನ ಅಥವಾ ಅಭ್ಯಾಸವಾಗಿದೆ. ಆಹಾರಗಳು ನಮ್ಮ ದೇಹಕ್ಕೆ ಶಕ್ತಿ, ಪ್ರೋಟೀನ್‍ಗಳು, ಅಗತ್ಯ ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಜೀವಿಸಲು, ಬೆಳೆಯಲು ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಒದಗಿಸುತ್ತವೆ. ಆದ್ದರಿಂದ ಸಮತೋಲಿತ ಆಹಾರವು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಮುಖ್ಯವಾಗಿದೆ. ಅನಾರೋಗ್ಯಕರ ಆಹಾರವು ಅನೇಕ ಆಹಾರ-ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದಂತಹ ಎಲ್ಲರಿಗೂ ಒಂದೊಂದು ತುಳಸಿ ಗಿಡಗಳನ್ನು ಗಣ್ಯರಿಂದ ವಿತರಿಸಲಾಯಿತು.

ಡಾ. ಅರವಿಂದ ರಾಠೋಡ, ಸಹಾಯಕ ಪ್ರಾಧ್ಯಾಪಕರು ಇವರು ಎಲ್ಲಾ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಕವಿತಾ ರಾಠೋಡ, ಸಹಾಯಕ ವೈಧ್ಯಾಧಿಕಾರಿಗಳು ಇವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಹೇಳಿದರು. ಹಾಗೂ ಡಾ. ಪ್ರಶಾಂತ, ಸಹಾಯಕ ಪ್ರಾಧ್ಯಾಪಕರು ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕ ಸಿಬ್ಬಂದಿ ವರ್ಗ ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಹಾಗೂ ಬೀದರ ಜಿಲ್ಲೆಯ ಹನೀ ಬೀಸ್ ಪಬ್ಲಿಕ್ ಶಾಲೆಯ 100 ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಣದದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಮುಕ್ತಾಯಗೊಳಿಸಿ ಇದರ ಲಾಭಪಡೆದರು.