ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಅರಕೇರಾ.ಸೆ.೨೪-ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು ಪೋಷಣೆ ಅಭಿಯಾನ ಮುಖ್ಯಉದ್ದೇಶ ವೆನೆಂದರೆ ೦ ರಿಂದ ೬ ವರ್ಷದ ಮಕ್ಕಳ ಅಪೌಷ್ಠಿಕತೆ ಕಡಿಮೆ ಮಾಡುವದು ಮಕ್ಕಳಲ್ಲಿನ ಕುಂಠಿತ ಬೆಳೆವಣಿಗೆಯನ್ನು ತಡೆಗಟ್ಟುವದು ಅಪೌಷ್ಠಿಕತೆಯನ್ನು ತಪ್ಪಿಸುವುದು ಶಿಶುಮರಣ ಪ್ರಮಾಣ ಕಡಿಮೆ ಮಾಡುವುದೆಂದು ಬಿಜೆಪಿ ಯುವ ಮುಖಂಡ ಕೆ.ಭಗವಂತ್ರಾಯ ನಾಯಕ ಹೇಳಿದರು.
ಅವರು ಮಲ್ಲೇದೇವರಗುಡ್ಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಜುಟ್ಟಮರಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆವತಿಯಿಂದ ಏರ್ಪಡಿಸಲಾದ ಗಲಗ ವಲಯಮಟ್ಟದ ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಬಸವರಾಜ ನಾಯಕ ಜೋತಿಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿಮಾತನಾಡಿದ ಅವರು ಎಲ್ಲಾ ಮಕ್ಕಳು ಅಪೌಷ್ಠಿಕತೆಯಿಂದ ಹೊರಬಂದು ಪೌಷ್ಠಿಕತೆ ಹೊಂದಿರಬೇಕು ಇದರಲ್ಲಿ ಅಂಗನವಾಡಿಕಾರ್ಯಕರ್ತೆ ಪ್ರಮುಖ ಪಾತ್ರವಾಗಿದೆಂದರು.
ಪ್ರಾಸ್ತಾವಿಕವಾಗಿ ಶಿವಲಕ್ಷ್ಮೀ ಮೇಲ್ವಿಚಾರಕರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಉಪಾದ್ಯಕ್ಷರಾದ ಹನ್ಮಂತ್ರಾಯ, ಗ್ರಾಮ ಪಂಚಾಯತ ಸದಸ್ಯರುಗಳಾದ ಶ್ರೀಕಾಂತನಾಯಕ ಜಲ್ಲೆ ಭರಮಯ್ಯನಾಯಕ ,ಬಸವರಾಜ, ಪಂಪನಗೌಡ, ಶಾಂತಪ್ಪ, ಶಿವಪ್ಪ, ಶಿವುಕುಮಾರ,ಕಾರ್ಯದರ್ಶಿ ನಾಗೇಂದ್ರ, ಮುಖ್ಯೋಪಾದಯ್ಯರಾದ ಸಾವಿತ್ರಿ,ಅಂಗನವಾಡಿಕಾರ್ಯಕರ್ತೆರಾದ ರಾಗಮ್ಮ, ,ಹುಲಿಗೆಮ್ಮ,ತಾರಾಬಾಯಿ,ರಾಜೆಶ್ವರಿ,ಮಂಜುಳಾ,ಲಲಿತಾ, ಆಶಾ, ಲಕ್ಷ್ಮೀ, ಮಂಜುಳಾ ಮತ್ತು ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತಕಾರ್ಯಕ್ರಮ ಹಾಗೂ ಅನ್ನ ಪ್ರಸನ್ನ ಕಾರ್ಯಕ್ರಮಜರುಗಿತು.