ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮ

ಅರಕೇರಾ.ಸೆ.೨೩- ಮಕ್ಕಳ ಪೌಷ್ಠಿಕ ಆಹಾರ ಪದ್ದತಿಗೆ ಸರಕಾರ ಒತ್ತು ನೀಡಿದ್ದು ಅಭಿಯಾನ ಆರಂಭಿಸಿದೆ ಗ್ರಾಮೀಣಾ ಮಕ್ಕಳು ಹಾಗೂ ಗರ್ಭೀಣಿಯರು ಬಾಣಂತಿಯರು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಸುಧಾರಣೆ ಕಾಣಲು ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ ಅನುಕೂಲವಾಗಿದೆಂದು ಎಸಿಡಿಪಿಓ ನಾಗರತ್ನನಾಯಕ ಹೇಳಿದರು.
ಅವರು ಕೆ.ಇರಬಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಬರುವ ಮರ್ಕಲರದೊಡ್ಡಿ ಅಂಗನವಾಡಿಕೇಂದ್ರದಲ್ಲಿ ಅಯೋಜಿಸಿದ ಶಿಶು ಅಭಿವೃದ್ದಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಮಕ್ಕಳ ಆರೋಗ್ಯ ರಕ್ಷಣೆಗೆ ಪೋಷಣ ಅಭಿಯಾನ ಕಾರ್ಯಕ್ರಮ ಉತ್ತಮವಾಗಿದ್ದು ಕಡಿಮೆ ತೂಕದ ಮಕ್ಕಳ ಜನನ ನಿಯಂತ್ರಣ ಅಪೌಷ್ಠಿಕತೆ ತಡೆಗಟ್ಟುವುದು ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹಿನತೆಯನ್ನು ತಡೆಗಟ್ಟುವದು ತಾಯಿ ಮಕ್ಕಳ ನವಜಾತ ಶಿಶು ಮರಣ ತಪ್ಪಿಸುವುದು ಗರ್ಭಿಣಿಯರು ಹಸಿರು ತರಕಾರಿಯನ್ನು ಹೆಚ್ಚು ಹೆಚ್ಚಾಗಿಬಳಸುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಮ್ಮ ದಳವಾಯಿ ಗ್ರಾಮ ಪಂಚಾಯತ ಅಧ್ಯಕ್ಷರು ಕೆ.ಇರಬಗೇರಾ ವಹಿಸಿದ್ದರು.ಮೇಲ್ವಿಚಾರಕರಾದ ಶಾಂತಾಬಾಯಿ, ಗಂಗಾಶ್ರೀ ನಿರ್ಮಾಲ, ಬಸ್ಸಯ್ಯ ಸಾತಲ್ ತಾಲ್ಲೂಕಾ ಶಿಕ್ಷಕರ ಸಂಘದ ನಿರ್ದೇಶಕರು,ವಿಶ್ವನಾಥ, ದಾನಮ್ಮಹಡಗಲಿ .ಆಶಾ,ಪದ್ಮಜಾ ಮಜ್ಜಿಗೆ, ರಂಗಮ್ಮ,ಮೀನಾಕಿ ಅಮರೇಶ ನಾಯಕ ಕುಪಗಲ್ ಅಂಗನವಾಡಿ ಕಾರ್ಯಕರ್ತೆರು , ಮುಖ್ಯೋಪಾದ್ಯಯರಾದ ಚಿದಾನಂದಪ್ಪ ವಿಶ್ವನಾಥಶೆಟ್ಟಿ, ಸ್ತ್ರೀ ಶಕ್ತಿ ಗುಂಪಿನ ತಾಲ್ಲುಕಾ ಅಧ್ಯಕ್ಷರಾದ ಶರಣಮ್ಮ ಮುಂತಾದವರು ಭಾಗವಹಿಸಿದ್ದರು.