ರಾಷ್ಟ್ರೀಯ ಪಿಂಚಣಿ ದಿನ ಕಾರ್ಯಕ್ರಮಕ್ಕೆ ಚಾಲನೆ

ಇಲಕಲ್ಲ :ಸೆ.16: ತಾಲೂಕಿನ ಹಿರೇ ಕೊಡಗಲಿ ಗ್ರಾಮ ಪಂಚಾಯತಿಯಲ್ಲಿ ರಾಷ್ಟ್ರೀಯ ನೆರವು ಯೋಜನೆಗಳಿಗೆ ಸಂಭಂಧಿಸಿದಂತೆ ಪಿಂಚಣಿ ಫಲಾನುಭವಿಗಳಿಗೆ ಕುಂದು ಕೊರತೆಗಳನ್ನು ನೋಂದಾಯಿಸಲು ಅಧ್ಯಕ್ಷರು ಉಪಾಧ್ಯಕ್ಷರ ಸಮುಖದಲ್ಲಿ ಪಿಂಚಣಿ ದಿನವನ್ನು ಆಚರಿಸಲಾಯಿತು .

ಈ ಸಮಾರಂಭದಲ್ಲಿ ಅಧಿಕಾರಿಗಳು ಪಂಚಾಯತಿ ವ್ಯಾಪ್ತಿಯ ಫಲಾನುಭವಿಗಳಿಗೆ ವಿವಿಧ ಪಿಂಚಣಿ ಪ್ರಮಾಣ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಚಿದಾನಂದ ವಡವಡಗಿ ಗ್ರೇಡ್ 2 ತಹಶೀಲ್ದಾರ್,

ನವೀನ್ ಬಲಕುಂದಿ, ಕಂದಾಯ ನಿರೀಕ್ಷಕರು, ಮಲ್ಲಿಕಾರ್ಜುನ್ ಸಿರುಗುಪ್ಪಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಭೀಮನಗೌಡ ಮೂಲಿಮನಿ, ಗ್ರಾಮ ಆಡಳಿತ ಅಧಿಕಾರಿಗಳು, ಶಂಕರ್ ರಾಥೋಡ್ ಗ್ರಾಮ ಆಡಳಿತ ಅಧಿಕಾರಿಗಳು ಗುಡೂರ ಎಸ್.ಬಿ. ಹಾಗೂ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಲಕ್ಷ್ಮೀಬಾಯಿ ಪವಾಡೆಪ್ಪ ತಳವಾರ, ಉಪಾದ್ಯಕ್ಷರಾದ ಲಕ್ಷ್ಮವ್ವ ಅಭಿಮಾನ ವಡ್ಡರ ಹಾಗೂ ಸದಸ್ಯರು ಹಾಗೂ ಹಿರೇ ಕೊಡಗಲಿ ಸಿಬ್ಬಂದಿಗಳು ಹಾಜರಿದ್ದರು.