ರಾಷ್ಟ್ರೀಯ ಪತ್ರಿಕಾ ದಿನಾಚಾರಣೆ;ಬಹುಮಾನ ವಿತರಣೆ

ಪತ್ರಿಕಾ ಮಾಧ್ಯಮದಿಂದ ಪ್ರಜಾಪ್ರಭುತ್ವ ರಕ್ಷಣೆ
ರಾಯಚೂರು ನ ೧೬ :-ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸುವ ಮತ್ತು ಜನರನ್ನು ಎಚ್ಚರಿಸುವ ಶಕ್ತಿ ಮಾಧ್ಯಮಕ್ಕಿದೆ ಎಂದು ರಾಯಚೂರು ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೋ. ಹರೀಶ್ ರಾಮಸ್ವಾಮಿ ಅವರು ಹೇಳಿದರು.
ಅವರಿಂದ ನಗರದ ರಾಯಚೂರು ಪ್ರೆಸ್ ಗಿಲ್ಡ್‌ನಲ್ಲಿ ಆಯೋಜಿಸಿದ ರಾಷ್ಟ್ರೀ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು ಮಾತಾಡಿದರು. ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಿಂದಿನ ಹೋರಾಟ ರೋಚಕವಾಗಿದೆ. ಪತ್ರಿಕೆಗಳು ಪೆನ್ ಇದೆ ಎಂದು ಏನಾದರು ಬರೆಯುವುದಿಲ್ಲ. ಪತ್ರಕರ್ತರಿಗೆ ಸತ್ಯವನ್ನು ಹುಡುಕುವ ಒಳ ಜ್ಞಾನ ಇದೆ.
ಮಧ್ಯಮ ಸ್ವತಂತ್ರವಾಗಿದ್ದರು, ಅಂತರ್ಯದಲ್ಲಿ ಸಂಪಾದಕೀಯದ ಅಧೀನದಲ್ಲಿದೆ. ಸಂಪಾದಕೀಯ ಮಂಡಳಿ ಕೈಗೊಳ್ಳುವ ನಿರ್ಧಾರಗಳಿಗನುಸಾರ ಕೆಲಸ ನಿರ್ವಹಿಸಬೇಕಾಗುತ್ತದೆ. ಟೀಕೆಗಳನ್ನು ಸಮಾಜ ಒಪ್ಪುತ್ತಿಲ್ಲ.ಈ ಹಿಂದೆ ಹಳದ ವರದಿಗಾರಿಕೆ ಮಾಧ್ಯಕೆಕ್ಕೆ ಕ್ಪು ಚುಕ್ಕೆಯಾಗಿತ್ತು. ಆದರೆ ಈಗ ಸುಳ್ಳು ವರದಿಗಾರಿಕೆ ಸಮಾಜಕ್ಕೆ ಬಹುದೊಡ್ಡ ಕಂಠಕವಾಗಿದೆ.ಡಿಜಿಟಲ್ ಮಾಧ್ಯದಲ್ಲಿ ಇದು ತೀವ್ರವಾಗಿದೆ. ಈ ಬಗ್ಗೆ ಎಚ್ಚರ ಅಗತ್ಯವಾಗಿದೆ.
ಸಭೆಯ ಅಧ್ಯಕ್ಷತೆಯನ್ನು ರಾಯಚೂರು ಗಿಲ್ಡ್ ಅಧ್ಯಕ್ಷರಾದ ಚನ್ನಬಸವಣ್ಣ ಅವರು ವಹಿಸಿದ್ದರು, ವಿಜಯ ಜಾಗಟಗಲ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಸಿದ್ದಯ್ಯ ಸ್ವಾಮಿ ಅವರು ಸ್ವಾಗತಿಸಿದರು. ವೆಂಕಟೇಶ ಅವರು ನಿರೂಪಿಸಿದರು. ಕಳೆದ ಒಂದು ವಾರದ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾದ ವಿಜೇತರಿಗೆ ಬಹುಮಾನ ನೀಡಲಾಯತು.
ವೇದಿಕೆಯ ಮೇಲೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ನಾಗಡದಿನ್ನಿ ಅವರು ಉಪಸ್ಥಿತರಿದ್ದರು.