ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆ, ಹರಿಹರದ ಬ್ರದರ್ ಜಿಮ್‌ಗೆ 16 ಪದಕಗಳು

ದಾವಣಗೆರೆ.ಮೇ.೩೧;   ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿ 45ನೇ ರಾಷ್ಟ್ರೀಯ ಆರ್ಮ್ ರೆಜಲಿಂಗ್ (ಪಂಜ ಕುಸ್ತಿ) ಸ್ಪರ್ಧೆಗಳು ನಡೆದಿದ್ದು, ಹರಿಹರ ಬ್ರದರ್ ಜಿಮ್‌ನ ಕ್ರೀಡಾಪಟುಗಳು ಒಟ್ಟು 16 ಪದಕಗಳನ್ನು ಪಡೆದಿದ್ದಾರೆ.ಈ ಸ್ಪರ್ಧೆಗಳಲ್ಲಿ 21 ರಾಜ್ಯಗಳಿಂದ ಸುಮಾರು 850 ಜನ ಯುವಕ ಯುವತಿ ಸ್ಪರ್ಧಾಳುಗಳು ಭಾಗವಹಿಸಿದ್ದು, ದಾವಣಗೆರೆ ಜಿಲ್ಲೆಯ  ಹರಿಹರದ ಬ್ರದರ್ ಜಿಮ್‌ ಯುವಕ ಯುವತಿಯರು ಒಟ್ಟು 30 ಜನ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರುಅವರು 4 ಚಿನ್ನದ ಪದಕ, 7 ಬೆಳ್ಳಿಯ ಪದಕ, 5 ಕಂಚಿನ ಪದಕ ಸೇರಿದಂತೆ ಒಟ್ಟು 16 ಪದಕಗಳನ್ನು ಗೆದ್ದುಕೊಂಡಿದ್ದಾರೆ.ಇವರಲ್ಲಿ 4 ಜನ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಆರ್ಮ್ ರೆಜಲಿಂಗ್ (ಪಂಜಕುಸ್ತಿ) ಸ್ಪರ್ಧೆಗಳಿಗೆ ಆಯ್ಕೆಯಾಗಿ ಹರಿಹರ ನಗರಕ್ಕೆ ದಾವಣಗೆರೆ ಜಿಲ್ಲೆಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾರೆ. ಈ ವಿಜೇತ ಕ್ರೀಡಾಪಟುಗಳಿಗೆ ಹರಿಹರ ಬ್ರದರ್ ಜಿಮ್‌ನ ಸಂಚಾಲಕ ಅಂತರರಾಷ್ಟ್ರೀಯ ದೇಹದಾರ್ಡ್ಯ ಪಟು ಅಕ್ರಂ ಬಾಷಾ, ಜಿಮ್‌ನ ತರಬೇತುದಾರ, ಅಂತರರಾಷ್ಟ್ರೀಯ ದೇಹದಾರ್ಡ್ಯ ಪಟು ಮೊಹಮ್ಮದ್ ರಫೀಕ್ ಹಾಗೂ ಬ್ರದರ್ ಜಿಮ್‌ನ ಎಲ್ಲಾ ಕ್ರೀಡಾಪಟುಗಳು ಹರಿಹರ ನಗರದ ಎಲ್ಲಾ ಕ್ರೀಡಾಪ್ರೇಮಿಗಳು ಅಭಿನಂದಿಸಿದ್ದಾರೆ.