ರಾಷ್ಟ್ರೀಯ ನೈರ್ಮಲ್ಯ ದಿನಾಚರಣೆ

ಕಲಬುರಗಿ:ಜೂ.23:ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜೇವರ್ಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ಇಂದು ಕಾಲೇಜಿನ ಸಭಾಂಗಣದಲ್ಲಿ ಏರ್ಪಾಡಿಸಲಾಗಿದ್ದ ‘ ರಾಷ್ಟ್ರೀಯ ನೈರ್ಮಲ್ಯ (ಸುಚಿತ್ವ) ದಿನಾಚರಣೆ’ ಮತ್ತು ‘ಹದಿ ಹರೆಯದವರ ಆರೋಗ್ಯ ಸಮಸ್ಯೆಗಳು, ಪರಿಹಾರಗಳು ಮತ್ತು ಮುಂಜಾಗ್ರತಾ ಕ್ರಮಗಳ ಕಾರ್ಯಕ್ರಮವನ್ನು ಸಿಬಿಸಿ ಉಪಾಧ್ಯಕ್ಷರಾದ ರವೀಂದ್ರಕುಮಾರ ವೈ.ಕೋಳಕೂರ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯರಾದ ಮೊಹಮ್ಮದ್ ಅಲ್ಲಾಉದ್ದೀನ್ ಸಾಗರ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, RKSK ಜಿಲ್ಲಾ ಸಂಯೋಜಕ ಶಿವಕುಮಾರ ಕಾಂಬಳೆ, ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಾದ ರೇವಪ್ಪ ಕಾಂಬಳೆ, ಅಶೋಕ ಬಡಿಗೇರ, ನಿಂಗಣ್ಣ ಪಾಟೀಲ, ಲಕ್ಷ್ಮೀ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.